ಬೇಕಾಗುವ ಪದಾರ್ಥಗಳು
ಕ್ಯಾರೆಟ್ -4-5
ಆಲೂಗಡ್ಡೆ – 2
ಉಪ್ಪು – ರುಚಿಗೆ ತಕ್ಕಷ್ಟು
ಹೆಸರುಕಾಳು – 1 ಚಿಕ್ಕ ಬಟ್ಟಲು
ಅಚ್ಚ ಖಾರದ ಪುಡಿ – ಅರ್ಧ ಚಮಚ
ಜೀರಿಗೆ ಪುಡಿ – ಅರ್ಧ ಚಮಚ
ಮೆಂತ್ಯೆ ಸೊಪ್ಪಿನ ಪುಡಿ – ಅರ್ಧ ಚಮಚ
ದನಿಯಾ ಪುಡಿ – ಆರ್ಧ ಚಮಚ
ಗರಂ ಮಸಾಲಾ ಪುಡಿ – ಅರ್ಧ ಚಮಚ
ಅರಿಶಿಣದ ಪುಡಿ – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಪುದೀನಾ – ಸ್ವಲ್ಪ
ಹಸಿಮೆಣಸಿನ ಕಾಯಿ – 3-4
ಮೊಟ್ಟೆ – 4-5
ಬ್ರೆಡ್ ಪೌಡರ್ – 1 ಬಟ್ಟಲು
ಎಣ್ಣೆ ಕರಿಯಲು

RELATED ARTICLES  ಪಾಲಾಕ್ ಪನ್ನೀರ್

ಮಾಡುವ ವಿಧಾನ…
ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ನೀರು, ಉಪ್ಪು ಹಾಕಬೇಕು. ಆಲೂಗಡ್ಡೆ, ಕ್ಯಾರೆಟ್ ನ್ನು ಸಣ್ಣದಾಗಿ ಕತ್ತರಿಸಿಕೊಂಡು ನೀರಿಗೆ 10-15 ನಿಮಿಷ ಬೇಯಲು ಬಿಡಬೇಕು. ಹೆಸರುಕಾಳನ್ನು ಬೇಯಿಸಿಕೊಳ್ಳಬೇಕು. ಬೆಂದ ಬಳಿಕ ನೀರನ್ನು ತೆಗೆಯಬೇಕು. ಕ್ಯಾರೆಟ್, ಆಲೂಗಡ್ಡೆ, ಹೆಸರುಕಾಳನ್ನು ನುಣ್ಣಗೆ ಮಾಡಿಕೊಳ್ಳಬೇಕು.
ಮತ್ತೊಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ನುಣ್ಣೆ ಮಾಡಿಕೊಂಡ ಕಾಳು, ಕ್ಯಾರೆಟ್, ಆಲೂವನ್ನು ಹಾಕಿ, ಅಚ್ಚ ಖಾರದ ಪುಡಿ, ಜೀರಿಗೆ ಪುಡಿ, ಮೆಂತ್ಯೆ ಸೊಪ್ಪಿನ ಪುಡಿ, ದನಿಯಾ ಪುಡಿ, ಗರಂ ಮಸಾಲಾ ಪುಡಿ, ಅರಿಶಿಣದ ಪುಡಿ, ಕೊತ್ತಂಬರಿ ಸೊಪ್ಪು (ಸಣ್ಣಗೆ ಹೆಚ್ಚಿದ್ದು) ಪುದೀನಾ, ಹಸಿಮೆಣಸಿನ ಕಾಯಿ (ಸಣ್ಣಗೆ ಹೆಚ್ಚಿದ್ದು, ಮೊಟ್ಟೆ 1, ಬ್ರೆಡ್ ಪೌಡರ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆಯನ್ನು ಹಾಕಿ ಬಿಸಿಯಾಗಲು ಬಿಡಬೇಕು.
ನಂತರ ಪಾತ್ರೆಯೊಂದಕ್ಕೆ 4 ಮೊಟ್ಟೆಯನ್ನು ಒಡೆದು ಹಾಕಿ. ಮಾಡಿಕೊಂಡ ಮಿಶ್ರಣವನ್ನು ವಡೆ ಆಕಾರಕ್ಕೆ ತಟ್ಟಿಕೊಳ್ಳಬೇಕು. ಉಳಿದ ಬ್ರೆಡ್ ಪೌಡರ್ ನ್ನು ಮತ್ತೊಂದು ಪಾತ್ರಯಲ್ಲಿಟ್ಟುಕೊಳ್ಳಬೇಕು.
ವಡೆಯಂತೆ ತಟ್ಟಿದ ಮಿಶ್ರಣವನ್ನು ಮೊದಲಿಗೆ ಮೊಟ್ಟೆಯಲ್ಲಿ ಅದ್ದಿ, ನಂತರ ಬ್ರೆಡ್ ಪೌಡರ್ ಲ್ಲಿ ಅದ್ದಬೇಕು. ಮತ್ತೆ ಮೊಟ್ಟೆಯಲ್ಲಿ ಅದ್ದಿ, ಬ್ರೆಡ್ ಪೌಡರ್ ನಲ್ಲಿ ಅದ್ದಿಕೊಳ್ಳಬೇಕು. ಹೀಗೆ ಎಲ್ಲವನ್ನೂ ಮಾಡಿಕೊಂಡು ಕಾದ ಎಣ್ಣೆಯಲ್ಲಿ ಹಾಕಿ ಕೆಂಪಗೆ ಕರಿದರೆ ರುಚಿಕರವಾಗ ತರಕಾರಿ ಕಬಾಬ್ ಸವಿಯಲು ಸಿದ್ಧ.

RELATED ARTICLES  ಬ್ರೆಡ್ ಸಮೋಸ