ಬೇಕಾಗುವ ಪದಾರ್ಥಗಳು
ಬ್ರೆಡ್ ಸ್ಲೈಸ್ ಗಳು -10-12
ರವೆ – ಅರ್ಧ ಬಟ್ಟಲು
ಮೊಸರು – ಅರ್ಧ ಬಟ್ಟಲು
ಅಕ್ಕಿ ಹಿಟ್ಟು – ಒಂದೂವರೆ ಬಟ್ಟಲು
ಅಡುಗೆ ಸೋಡಾ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು
ಎಣ್ಣೆ – 2-3 ಚಮಚ
ಜೀರಿಗೆ – ಸ್ವಲ್ಪ
ಸಾಸಿವೆ – ಸ್ವಲ್ಪ
ಉದ್ದಿನಬೇಳೆ, ಕಡಲೆಬೇಳೆ – ಸ್ವಲ್ಪ
ಕರಿಬೇವು – 3-4 ಹೆಚ್ಚಿದ್ದು
ಹಸಿಮೆಣಿಸಿನ ಕಾಯಿ – 3-4 ಹೆಚ್ಚಿದ್ದು
ಈರುಳ್ಳಿ – 1 ಸಣ್ಣದಾಗಿ ಹೆಚ್ಚಿದ್ದು

RELATED ARTICLES  ರುಚಿಕರವಾದ 'ಬಟರ್ ನಾನ್'

ಮಾಡುವ ವಿಧಾನ…
ಬ್ರೆಡ್ ನ ನಾಲ್ಕು ಬದಿಯಲ್ಲಿರುವ ಕಂದು ಬಣ್ಣದ ಭಾಗವನ್ನು ಕತ್ತರಿಸಿ ತೆಗೆದುಕೊಳ್ಳಬೇಕು.
ನೀರಿನಲ್ಲಿ 2 ನಿಮಿಷಗಳ ಕಾಲ ಬ್ರೆಡ್ ತುಂಡುಗಳನ್ನು ನೆನೆ ಹಾಕಬೇಕು.
ಪಾತ್ರೆಯೊಂದಕ್ಕೆ ರವೆ, ಅಕ್ಕಿ ಹಿಟ್ಟು ಮತ್ತು ನೀರನ್ನು ಸೇರಿಸಿ ಹಿಟ್ಟ ದಪ್ಪಗಿರುವಂತೆ ಕಲಸಿಕೊಳ್ಳಬೇಕು.
ನೀರಿನಿಂದ ಬ್ರೆಡ್ ತುಂಡುಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಹಿಸುಕಬೇಕು. ನಂತರ ಇದನ್ನು ಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಹಿಟ್ಟಿನಲ್ಲಿ ಯಾವುದೇ ಗಂಟುಗಳು ಇರದಂತೆ ನೋಡಿಕೊಳ್ಳಬೇಕು.
ನಂತರ ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಒಗ್ಗರಣೆಯ ಎಲ್ಲಾ ಪದಾರ್ಥಗಳನ್ನು ಹಾಕಿ ಕೆಂಪಗೆ ಮಾಡಿಕೊಂಡು ಇದನ್ನು ಹಿಟ್ಟಿನೊಳಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅಡುಗೆ ಸೋಡಾವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ಒಲೆಯ ಮೇಲೆ ತವಾ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಸೌಟಿನಿಂದ ಹಿಟ್ಟನ್ನು ಹಾಕಿ ದೋಸೆಯಾಕಾರಕ್ಕೆ ಬರುವಂತೆ ಮಾಡಿ ಎರಡೂ ಬದಿಯಲ್ಲಿ ಬೇಯಿಸಿದರೆ ರುಚಿಕರವಾದ ಬ್ರೆಡ್ ದೋಸೆ ಸವಿಯಲು ಸಿದ್ಧ.

RELATED ARTICLES  ಬಿಸಿಬೇಳೆ ಭಾತ್ ಪುಡಿ: ನೀವೇ ತಯಾರಿಸಿಕೊಳ್ಳಿ