ವಿಶ್ವದ ಆಟೋ ಉದ್ಯಮದಲ್ಲಿ ಎಲೆಕ್ಟ್ರಿಕ್ ಕಾರು ಮತ್ತು ಬೈಕ್ ಮಾದರಿಗಳಿಗೆ ದಿನದಿಂದ ಬೇಡಿಕೆ ಹೆಚ್ಚುತ್ತಿದ್ದು, ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆ ಬಿಎಂಡಬ್ಲ್ಯು ಕೂಡಾ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ. ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ ತಡೆ ಉದ್ದೇಶದಿಂದ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳು ಬೃಹತ್ ಯೋಜನೆ ರೂಪಿಸುತ್ತಿದ್ದು, ಬಿಎಂಡಬ್ಲ್ಯು ಎಲೆಕ್ಟ್ರಿಕ್ ಸ್ಕೂಟರ್ ಕೂಡಾ ಗಮನ ಸೆಳೆದಿದೆ.
ಬಿಎಂಡಬ್ಲ್ಯು “ಮೋಟಾರ್ಡ್ ವಿಷನ್ 100” ಸಂಶೋಧನಾ ತಂಡದಿಂದ ಈ ಹೊಸ ಮಾದರಿ ಸಿದ್ದಗೊಂಡಿದ್ದು, ನಗರ ಪ್ರದೇಶಗಳಿಗೆ ವರವಾಗಿ ಪರಿಣಮಿಸಲಿದೆ.ವಿಶೇಷ ವಿನ್ಯಾಸ ಹೊಂದಿರುವ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಬೈಕ್, ವಿಶ್ವ ಆಟೋ ಉದ್ಯಮದಲ್ಲಿ ಹೊಸ ಟ್ರೆಂಡ್ ಸೃಷ್ಠಿಸುವ ತವಕದಲ್ಲಿದೆ.
ಸ್ಕೂಟರ್ನಲ್ಲಿ ಸುಖಕರ ಪ್ರಯಾಣಕ್ಕೆ ಅನುಕೂಲವಾಗುವಂತೆ ವಿವಿಧ ವ್ಯವಸ್ಥೆಗಳಿದ್ದು, ಸಂಗೀತ ಆಲಿಸಲು ಮತ್ತು ಮೊಬೈಲ್ ಚಾರ್ಜಿಂಗ್ ಮಾಡಿಕೊಳ್ಳಬಹುದಾಗಿದೆ. ಹೊಸ ಮಾದರಿ ಸ್ಕೂಟರ್ನಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಅಪಾಯದ ಮೂನ್ಸೂಚನೆ ನೀಡಬಲ್ಲ ಕೆಲವು ವಿಶೇಷ ಸಾಧನಗಳು ಅಳವಡಿಸಲಾಗಿದೆ. ಸವಾರನಿಗೆ ಸಹಾಯಕಾರಿಯಾಗ ಬಲ್ಲ ಎಲ್ಲ ಮಾಹಿತಿಗಳು ಸ್ಕೂಟರ್ ಪ್ಯಾನಲ್ನಲ್ಲಿ ದೊರೆಯಲಿದೆ.
ಸವಾರನಿಗೆ ಸಹಾಯಕಾರಿಯಾಗ ಬಲ್ಲ ಎಲ್ಲ ಮಾಹಿತಿಗಳು ಸ್ಕೂಟರ್ ಪ್ಯಾನಲ್ನಲ್ಲಿ ದೊರೆಯಲಿದ್ದು, ಸದ್ಯದಲ್ಲೇ ವಿಶ್ವಾದ್ಯಂತ ಬಿಡುಗಡೆಗೊಳ್ಳಲಿದೆ.

RELATED ARTICLES  ಅಹಂ ಸ್ಫೂರ್ತಿಯನ್ನು ರೂಪಾಂತರಿಸುವದಕ್ಕೆ ಹೇಳಿದ್ದರು ಶ್ರೀಧರರು.