ಬೇಕಾಗುವ ಪದಾರ್ಥಗಳು
ತುಪ್ಪ – 1 ಚಮಚ
ದ್ರಾಕ್ಷಿ – ಸ್ವಲ್ಪ
ಗೋಡಂಬಿ – ಸ್ವಲ್ಪ
ಹಾಲು – 3 ಬಟ್ಟಲು
ಸಕ್ಕರೆ – 1/4 ಬಟ್ಟಲು
ಪನ್ನೀರ್ – ಅರ್ಧ ಬಟ್ಟಲು
ಏಲಕ್ಕಿ ಪುಡಿ – ಚಿಟಿಕೆಯಷ್ಟು

RELATED ARTICLES  ೧೯೪೬-೪೭ರ ಸುಮಾರಿಗೆ ಶ್ರೀಧರರು ಬರೆದ ಪತ್ರ.

ಮಾಡುವ ವಿಧಾನ…

ಮೊದಲು ಬಾಣಲೆಗೆ 1 ಚಮಚ ತುಪ್ಪವನ್ನು ಹಾಕಿ ದ್ರಾಕ್ಷಿ, ಗೋಡಂಬಿಯನ್ನು ಕೆಂಪಗೆ ಹುರಿದುಕೊಳ್ಳಬೇಕು.
ನಂತರ ಹಾಲನ್ನು ಹಾಕಿ ಕಾಯಲು ಬಿಡಬೇಕು. ಆಗಾಗ ಕೈಯಾಡಿಸಿ ಹಾಲು ಗಟ್ಟಿಯಾಗುವಂತೆ ಕಾಯಿಸಬೇಕು.
ಹಾಲು ಗಟ್ಟಿಯಾದ ಬಳಿಕ ಸಕ್ಕರೆ, ಪನ್ನೀರ್ ಹಾಕಿ 5 ನಿಮಿಷಗಳ ಕಾಲ ಕಾಯಲು ಬಿಟ್ಟು, ಕೊನೆಯಲ್ಲಿ ಏಲಕ್ಕಿ ಪುಡಿ ಹಾಕಿ ಡ್ರೈ ಫ್ರೂಟ್ಸ್ ಹಾಕಿ ಅಲಂಕರಿಸಿದರೆ ರುಚಿಕರವಾದ ಪನ್ನೀರ್ ಕೀರ್ ಸವಿಯಲು ಸಿದ್ಧ.

RELATED ARTICLES  ರುಚಿಯಾದ ಹೊಟೆಲ್ ಪಲಾವ್ ನೀವು ಕೂಡಾ ಮಾಡಬಹುದು!