ಸಾಮಗ್ರಿಗಳು

ಬಗೆಟ್ ಬ್ರೆಡ್‌‌‌ – 1 ಪೀಸ್
ಟೊಮ್ಯಾಟೋ ಪ್ಯೂರಿ – 1 ಕಪ್‌
ಹಸಿಮೆಣಸಿನ ಕಾಯಿ – 3
ಕ್ರಶ್ ಮಾಡಿದ ಬೆಳ್ಳುಳ್ಳಿ – 10 ಎಸಳು
ಆರಿಗ್ಯಾನೋ – 1 tbsp.
ಟೊಮ್ಯಾಟೋ – 2
ಆಲಿವ್‌ ಆಯಿಲ್‌ – 1 ಕಪ್
ಈರುಳ್ಳಿ – 2
ಕೆಂಪು, ಹಳದಿ, ಹಸಿರು ಬೆಲ್‌ ಪೆಪ್ಪರ್ – 2 ಕಪ್‌
ಪಾರ್ಸ್ಲಿ – 1 ಕಪ್
ಬ್ಲಾಕ್ ಆಲಿವ್ಸ್‌‌‌ – 1/2 ಕಪ್‌
ಕ್ರೀಮ್ ಚೀಸ್‌ – 1/2 ಕಪ್
ತುರಿದ ಚೀಸ್‌ – 1/2 ಕಪ್
ಬೆಣ್ಣೆ – 2 tbsp.

RELATED ARTICLES  ಏನಾಗಬೇಕೋ ಹಾಗೇ ಆಗುತ್ತದೆ! ಎಂದರು ಶ್ರೀಧರರು

ತಯಾರಿಸುವ ವಿಧಾನ

ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಬೆಳ್ಳುಳ್ಳಿ, ಈರುಳ್ಳಿ, ಹಸಿಮೆಣಸಿನಕಾಯಿ, ಉಪ್ಪು , ಪೆಪ್ಪರ್ ಪೌಡರ್‌, ಆರಿಗ್ಯಾನೋ, ಸಣ್ಣಗೆ ಹೆಚ್ಚಿದ ಟೊಮ್ಯಾಟೋ, ಟೊಮ್ಯಾಟೋ ಪ್ಯೂರಿ ಬೆರೆಸಿ 5 ನಿಮಿಷ ಕುಕ್ ಮಾಡಿ.

ಪ್ಲೇಟ್‌‌‌‌ನಲ್ಲಿ ಫಾಯಿಲ್ ಪೇಪರ್ ಹರಡಿ ಬ್ರೆಡ್‌‌‌ಅನ್ನು ಉದ್ದಕ್ಕೆ 2 ಭಾಗವಾಗಿ ಕತ್ತರಿಸಿ, ಫಾಯಿಲ್ ಪೇಪರ್ ಮೇಲೆ ಇಟ್ಟು ಕ್ರೀಮ್ ಚೀಸ್ ಸ್ಪ್ರೆಡ್ ಮಾಡಿ.

RELATED ARTICLES  ರುಚಿಕರವಾದ ಬದನೆಕಾಯಿ ರವೆ ಫ್ರೈ

ಕ್ರೀಮ್ ಚೀಸ್ ಲೇಯರ್ ಮೇಲೆ ಟೊಮ್ಯಾಟೋ ಮಿಕ್ಸ್‌, ಸ್ವಲ್ಪ ಬೆಲ್‌‌ಪೆಪ್ಪರ್, ಆಲಿವ್ಸ್ , ತುರಿದ ಚೀಸ್ ಹರಡಿ 200 ಡಿಗ್ರಿ ಸೆಂಟಿಗ್ರೇಡ್‌‌ನಲ್ಲಿ 8 ನಿಮಿಷ ಬೇಕ್ ಮಾಡಿ.
ಓಪನ್ ಫೇಸ್‌‌ ಸ್ಯಾಂಡ್‌‌ವಿಚ್‌‌‌ಅನ್ನು ನೀವು ಮಶ್ರೂಮ್ ಅಥವಾ ಶ್ರೆಡೆಡ್‌ ಚಿಕನ್‌ನೊಂದಿಗೆ ಕೂಡಾ ತಿನ್ನಬಹುದು.