ತಯಾರಿಸಲು ಅಗತ್ಯವಾದ ಸಾಮಗ್ರಿಗಳು

ಹೀರೇಕಾಯಿ: 1 ಕಪ್

ಒಣ ಮೆಣಸಿನ ಕಾಯಿ: 4 ರಿಂದ 5

ಉದ್ದಿನಬೇಳೆ: ಅರ್ಧ ಚಮಚ

ಹುಣಸೆಹಣ್ಣು: ರುಚಿಗೆ ತಕ್ಕಷ್ಟು

ತೆಂಗಿನಕಾಯಿ ತುರಿ: ಅರ್ಧ ಕಪ್

ಉಪ್ಪು: ರುಚಿಗೆ ತಕ್ಕಷ್ಟು

ಇಂಗು: ಸ್ವಲ್ಪ

ಕರಿಬೇವಿನ ಸೊಪ್ಪು: ಸ್ವಲ್ಪ

ತಯಾರಿಸುವ ವಿಧಾನ:

ಹೀರೇಕಾಯಿಯನ್ನು ಹೆಚ್ಚಿಕೊಂಡು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯೊಂದಿಗೆ ಹಾಕಿ ಸುಮಾರು ಐದು 5 ರಿಂದ 10 ನಿಮಿಷ ಹುರಿಯಿರಿ. ಆನಂತರ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ನಂತರ ಉದ್ದಿನಬೇಳೆ ಹಾಗೂ ಒಣಮೆಣಸು ಹಾಕಿ ಹುರಿಯಬೇಕು. ಹುರಿದ ಪದಾರ್ಥ ತಣ್ಣಗಾದ ನಂತರ ಹುರಿದ ಹೀರೇಕಾಯಿ, ಉದ್ದಿನಬೇಳೆ, ಒಣಮೆಣಸಿನೊಂದಿಗೆ ನೆನೆಸಿದ ಹುಣಸೆಹಣ್ಣು, ತೆಂಗಿನ ಕಾರಿ ತುರಿ, ಉಪ್ಪು ಹಾಕಿ ಮಿಕ್ಸರ್‌ನಲ್ಲಿ ರುಬ್ಬಿಕೊಳ್ಳಿ.(ನೆನಪಿಡಿ: ಒರಳುಕಲ್ಲಿನಲ್ಲಿ ರುಬ್ಬುವ ಅವಕಾಶವಿದ್ದರೆ ಚಟ್ನಿಯ ರುಚಿ ಹೆಚ್ಚಿರುತ್ತದೆ)

RELATED ARTICLES  ರುಚಿಯಾದ ಗರಿಗರಿಯಾದ ಅಕ್ಕಿ ಸಂಡಿಗೆ…!!

ಆನಂತರ ಒಂದು ಚಮಚ ಎಣ್ಣೆಯನ್ನು ಬಾಣಲೆಯಲ್ಲಿ ಹಾಕಿ ಬಿಸಿಯಾದ ನಂತರ ಇಂಗು ಹಾಗೂ ಕರಿಬೇವಿನ ಸೊಪ್ಪು ಹಾಕಿ ಹುರಿದು, ಬಿಸಿ ಆರಿದ ನಂತರ ಚಟ್ನಿಯನ್ನು ಮಿಶ್ರಣ ಮಾಡಿದರೆ ರುಚಿ ರುಚಿಯಾದ ಹೀರೇಕಾಯಿ ಚಟ್ನಿ ಸವಿಯಲು ಸಿದ್ದ. ಇದು, ಉದ್ದಿನ ದೋಸೆ ಹಾಗೂ ಚಪಾತಿಯೊಂದಿಗೆ ಹೆಚ್ಚು ರುಚಿಯಾಗಿರುತ್ತದೆ.

RELATED ARTICLES  ಮಿಕ್ಸ್ ವೆಜ್ ಕರ್ರಿ