ಮಲೆನಾಡಿನಲ್ಲಿ ಸಿಗುವ, ತಿನ್ನಲು ಯೋಗ್ಯವಾದ ಅಣಬೆಗಳಲ್ಲಿ ಅಕ್ಕಿ ಅಣಬೆ ಅತವಾ ದರಗು ಅಣಬೆ ಕೂಡಾ ಒಂದು. ಇದನ್ನು ಬಳಸಿ ಮಾಡಿದ ಅಣಬೆ ಸಾರು ಮಾಡುವ ವಿಧಾನ ಇಲ್ಲಿದೆ…

ಏನೇನು ಬೇಕು?

ಅಣಬೆ – ಒಂದು ದೊಡ್ಡ ಬಟ್ಟಲು
ತೆಂಗಿನಕಾಯಿ – ಅರ‍್ದ ಹೋಳು
ನೀರುಳ್ಳಿ – 2 ಮದ್ಯಮ ಗಾತ್ರ
ಬೆಳ್ಳುಳ್ಳಿ – 1
ಅರಿಶಿನ – ಚಿಟಿಕೆ
ಅಚ್ಚಕಾರದ ಪುಡಿ – 4 ಟಿ ಚಮಚ
ದನಿಯಾ – 1 ಟಿ ಚಮಚ

RELATED ARTICLES  ಸೂಪರ್ ಸ್ಕೂಟರ್...!

ಮಾಡುವ ಬಗೆ

ಮಸಾಲೆ ಕಾರ: ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ 1 ನೀರುಳ್ಳಿ, 1 ಬೆಳ್ಳುಳ್ಳಿಯನ್ನು ಹಾಕಿ ಬಾಡಿಸಿಕೊಳ್ಳಿ. ಇದಕ್ಕೆ ಅಚ್ಚಕಾರದ ಪುಡಿ, ದನಿಯಾ, ಅರಿಶಿನ ಹಾಕಿ ಸ್ವಲ್ಪ ಕೈ ಆಡಿಸಿ ಇಳಿಸಿ. ಈ ಮಸಾಲೆಗೆ ತೆಂಗಿನಕಾಯಿ ತುರಿ ಹಾಗು ಗೋಲಿ ಗಾತ್ರದ ಹುಣಸೆಹಣ್ಣು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಅಣಬೆಯನ್ನು ಚೆನ್ನಾಗಿ ತೊಳೆದು ನೀರನ್ನು ಹಿಂಡಿ ತೆಗೆಯಬೇಕು. ಒಂದು ಪಾತ್ರೆಯಲ್ಲಿ 1 ಟೇಬಲ್ ಚಮಚ ಎಣ್ಣೆಯನ್ನು ಬಿಸಿಮಾಡಿ 1 ನೀರುಳ್ಳಿಯನ್ನು ಹೆಚ್ಚಿ ಹಾಕಬೇಕು. ನೀರುಳ್ಳಿ ಬೆಂದ ಮೇಲೆ ಅಣಬೆಯನ್ನು ಹಾಕಿ ಸ್ವಲ್ಪ ಉಪ್ಪು ಹಾಕಿ. ಅಣಬೆಯಲ್ಲಿ ನೀರು ಬಿಟ್ಟು ಆ ನೀರು ಸಂಪೂರ‍್ಣ ಆರಿದ ಮೇಲೆ ಸಿದ್ದಪಡಿಸಿದ ಮಸಾಲೆ ಕಾರವನ್ನು ಹಾಕಿ, ರುಚಿಗೆ ತಕ್ಕಂತೆ ಉಪ್ಪು ಬೆರೆಸಿ ಚೆನ್ನಾಗಿ ಕುದಿಸಿ ಇಳಿಸಿ. ಮಲೆನಾಡಿನ ಅಕ್ಕಿ ಅಣಬೆ ಸಾರು ಸಿದ್ದ.

RELATED ARTICLES  'ವೆಜ್ ಆಮ್ಲೆಟ್'