ಬೇಕಾಗುವ ಪದಾರ್ಥಗಳು
ಸಕ್ಕರೆ 1 ಬಟ್ಟಲು
ಕಸ್ಟರ್ಡ್ ಪುಡಿ – ಅರ್ಧ ಬಟ್ಟಲು
ಕೇಸರಿ ದಳ – 3-4
ತುಪ್ಪು – ಸ್ವಲ್ಪ
ಗೋಡಂಬಿ – ಸಣ್ಣಗೆ ಕತ್ತರಿಸಿದ್ದು ಅರ್ಧ ಹಿಡಿಯಷ್ಟು
ಮಾಡುವ ವಿಧಾನ…
ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಅದಕ್ಕೆ ಸಕ್ಕರೆ ಹಾಗೂ ಕಸ್ಟರ್ಡ್ ಪುಡಿ, ಒಂದು ಬಟ್ಟಲು ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಪ್ಪು ಹಾಕಿ. ತುಪ್ಪ ಕಾದ ಬಳಿಕ ಗೋಡಂಬಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
ನಂತರ ಕಸ್ಟರ್ಡ್ ಪುಡಿ ಮಿಶ್ರಣವನ್ನು ಇದಕ್ಕೆ ಹಾಕಿ ಚೆನ್ನಾಗಿ ಕೈಯಾಡಿಸಬೇಕು. ಬಳಿಕ ಹಾಲಿನಲ್ಲಿ ನೆನೆಸಿದ ಕೇಸರಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 25-30 ನಿಮಿಷಗಳ ಸುಧೀರ್ಘವಾಗಿ ಬಾಣಲೆ ತಳಬಿಡುವವರೆಗೂ ಕೈಯಾಡಿಸುತ್ತಿರಬೇಕು. ಬಳಿಕ ತಟ್ಟೆಯೊಂದಕ್ಕೆ ತುಪ್ಪ ಸವರಿ ಮಿಶ್ರಣವನ್ನು ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ, ಅಲಂಕರಿಸಿದರೆ, ರುಚಿಕರವಾದ ಕಸ್ಟರ್ಡ್ ಹಲ್ವ ಸವಿಯಲು ಸಿದ್ಧ.