ಸಾಮಾಗ್ರಿಗಳು –
ಖರ್ಜೂರ ಬೀಜರಹಿತವಾದುದು – 20
ಸಣ್ಣದಾಗಿ ಕತ್ತರಿಸಿರುವ ಒಣಹಣ್ಣುಗಳು – ದ್ರಾಕ್ಷಿ, ಬಾದಾಮಿ, ಗೋಡಂಬಿ, ಪಿಸ್ತಾ 1 ಕಪ್
ಬೇಕಾದಷ್ಟು ತುರಿದ ಕೊಬ್ಬರಿ

ಮಾಡುವ ವಿಧಾನ ವೈಕ್ರೋವೇವ್ ಟ್ರೇಯನ್ನು ತೆಗೆದುಕೊಂಡು ಅದರಲ್ಲಿ ಕತ್ತರಿಸಿರುವ ಒಣಹಣ್ಣುಗಳನ್ನು ಹಾಕಿ. 2 ನಿಮಿಷಗಳ ಕಾಲ ಹಣ್ಣುಗಳನ್ನು ಹುರಿದುಕೊಳ್ಳಿ.

RELATED ARTICLES  ರುಚಿಕರವಾದ 'ಬಟರ್ ನಾನ್'

ಈಗ ಖರ್ಜೂರವನ್ನು ಇದರಲ್ಲಿ ಹಾಕಿ ಮತ್ತು 30 ರಿಂದ 40 ಸೆಕೆಂಡ್‌ಗಳ ಕಾಲ ಅದನ್ನು ಬಿಸಿ ಮಾಡಿ.

ಈಗ ಟ್ರೇಯನ್ನು ಹೊರತೆಗೆದು ಅದಕ್ಕೆ ತುರಿದ ಕೊಬ್ಬರಿಯನ್ನು ಸೇರಿಸಿ.

RELATED ARTICLES  ಜನತೆಗೆ ಆತ್ಮಸ್ಥೈರ್ಯ ತುಂಬಿದ ಅದ್ಬುತ ವ್ಯಕ್ತಿ.

ಮಿಕ್ಸಿಯಲ್ಲಿ ಇದನ್ನು ರುಬ್ಬಿಕೊಳ್ಳಿ

ಇನ್ನು ಮಿಶ್ರಣ ತಣ್ಣಗಾದ ನಂತರ ನಿಮ್ಮ ಕೈಗಳಿಂದ ಅದನ್ನು ಲಾಡಿನ ಉಂಡೆಗಳನ್ನಾಗಿ ಕಟ್ಟಿ.

ಕೊಬ್ಬರಿಯಲ್ಲಿ ಈ ಉಂಡೆಗಳನ್ನು ಹೊರಳಾಡಿಸಿ.

ಬೇಕಿದ್ದರೆ ಚಾಕಲೇಟ್ ಚಿಪ್ಸ್, ಎಳ್ಳು, ಕುಂಬಳಕಾಯಿ ಬೀಜ, ಕಡಲೆಯನ್ನು ಲಾಡಿಗೆ ಸೇರಿಸಿಕೊಳ್ಳಬಹುದಾಗಿದೆ.