ಬೇಕಾಗುವ ಪದಾರ್ಥಗಳು
ಹಾಲು- 1 ಲೀಟರ್
ಮೊಸರು – 1 ಬಟ್ಟಲು
ಸಕ್ಕರೆ – ಬಟ್ಟಲು
ಗೋಡಂಬಿ – ಸ್ವಲ್ಪ
ಏಲಕ್ಕಿ ಪುಡಿ – ಸ್ವಲ್ಪ

ಮಾಡುವ ವಿಧಾನ…

ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಹಾಲು ಹಾಕಿ. ಹಾಲು ಚೆನ್ನಾಗಿ ಕುದಿಯಲು ಬಿಡಬೇಕು. 1 ಲೀಟರ್ ಹಾಲು ಅರ್ಧ ಲೀಟರ್ ಆಗುವಷ್ಟು ಕೆಂಪಗೆ ಕಾಯುವಂತೆ ನೋಡಿಕೊಳ್ಳಬೇಕು.

RELATED ARTICLES  ಆರೋಗ್ಯಕರವಾದ ಕ್ಯಾರೆಟ್ ಚಟ್ನಿ

ನಂತರ ಇದಕ್ಕೆ ಮೊಸರು ಹಾಕಿ ಚೆನ್ನಾಗಿ ಕುದಿಸಬೇಕು. ಆಗಾಗ ಕೈಯಾಡಿಸುತ್ತಿರಬೇಕು. ಹಾಲಿನೊಂದಿಗೆ ಚೆನ್ನಾಗಿ ಬೆರೆತು ಕೆಂಪಗಾಗುವಂತೆ ಕಾಯಿಸಬೇಕು.

ನಂತರ ಬಾಣಲೆ ತೆಗೆದುಕೊಂಡು ಅದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಉರಿಯಬೇಕು. ಸಕ್ಕರೆ ಕರಗಿದ ಬಳಿಕ ಕಾದ ಹಾಲಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಬೇಕು.

RELATED ARTICLES  ಡ್ರೈ ಫ್ರೂಟ್ಸ್‌ ಜಾಮೂನ್‌

ಕೊನೆಯದಾಗಿ ಗೋಡಂಬಿ ಹಾಕಿ ಅಲಂಕರಿಸಿದರೆ ರುಚಿಕರವಾದ ಬೆಳಗಾವಿ ಕುಂದಾ ಸವಿಯಲು ಸಿದ್ಧ.