ಬೇಕಾಗುವ ಸಾಮಾಗ್ರಿಗಳು
ಅಕ್ಕಿ- 1 ಬಟ್ಟಲು
ಸಾಸಿವೆ – 1 ಚಮಚ
ಉದ್ದಿನಬೇಳೆ – 1 ಚಮಚ
ಕರಿಬೇವು – ಸ್ವಲ್ಪ
ಏಲಕ್ಕಿ – 2-3
ಒಣಮೆಣಸಿನ ಕಾಯಿ – 5-6
ಮೆಂತ್ಯ – 1 ಚಮಚ
ಕೊಬ್ಬರಿ – ಅರ್ಧ ಬಟ್ಟಲು
ಉದ್ದ ಬದನೆಕಾಯಿ – 2-3
ಕಡ್ಲೆಬೇಳೆ – 2 ಚಮಚ
ಹುಣಸೆಹಣ್ಣು – ಸ್ವಲ್ಪ
ಚಕ್ಕೆ – ಸ್ವಲ್ಪ
ಲವಂಗ – ಸ್ವಲ್ಪ
ಅರಿಶನ – ಅರ್ಧ ಚಮಚ
ದನಿಯಾ – 1 ಚಮಚ
ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ…

RELATED ARTICLES  "ಬದನೇಕಾಯಿ ಎಣಗಾಯಿ"

ಅಕ್ಕಿ ತೊಳೆದು ಅನ್ನವನ್ನು ಮಾಡಿಟ್ಟುಕೊಂಡು, ಅನ್ನ ತಣ್ಣಗಾಗಲು ಬಿಡಬೇಕು.
ಸಣ್ಣ ಬಟ್ಟಲು ತೆಗೆದುಕೊಂಡು ಅದಕ್ಕೆ ಹುಣಸೆಹಣ್ಣು, ಸ್ವಲ್ಪ ನೀರು ಹಾಕಿ ನೆನೆಯಲು ಬಿಡಬೇಕು.
ಒಲೆಯ ಮೇಲೆ ಪ್ಯಾನ್ ಇಟ್ಟು ಬಿಸಿ ಮಾಡಿ ನಂತ ಕಡ್ಲೆಬೇಳೆ, ಉದ್ದಿನಬೇಳೆ, ದನಿಯಾ, ಮೆಂತ್ಯ, ಚಕ್ಕೆ, ಏಲಕ್ಕಿ, ಲವಂಗ, ಒಣಗಿದ ಮೆಣಸಿನ ಕಾಯಿ, ಅರಿಶಿನ ಹಾಗೂ ಕೊಬ್ಬರಿ ಎಲ್ಲವನ್ನು ಕೆಂಪಗೆ ಹುರಿದುಕೊಂಡು ತಣ್ಣಗಾಗಲು ಬಿಡಬೇಕು.
ತಣ್ಣಗಾದ ಬಳಿಕ ಮಿಕ್ಸಿ ಜಾರ್ ಗೆ ಪುಡಿ ಮಾಡಿಕೊಳ್ಳಬೇಕು.
ಬದನೆಕಾಯಿಯನ್ನು ಚೆನ್ನಾಗಿ ತೊಳೆದೆ ಉದ್ದುದ್ದವಾಗಿ ಹೆಚ್ಚಿಕೊಳ್ಳಬೇಕು.
ಮತ್ತೊಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ, ಕಡ್ಲೆಬೇಳೆ, ಉದ್ದಿನಬೇಳೆ, ಅರಿಶಿನ, ಕರಿಬೇವಿನ ಸೊಪ್ಪು ಹಾಗಿ ಒಗ್ಗರಣೆ ಮಾಡಿ ಹೆಚ್ಚಿಕೊಂಡ ಬದನೆಕಾಯಿ ಹಾಕಿ ಹುರಿಯಬೇಕು.
8-10 ನಿಮಿಷದ ಬಳಿಗ ಹುಣಸೆಹಣ್ಣಿನ ರಸ ಸೇಸಿ 5-10 ನಿಮಿಷ ಬದನೆಕಾಯಿ ಬೇಯಲು ಬಿಡಬೇಕು.
ನಂತರ ವಾಂಗೀಬಾತ್ ಪುಡಿ, ಉಪ್ಪು, ಅನ್ನವನ್ನು ಸೇರಿಸಿ ಮಿಶ್ರಣವನ್ನು ಅನ್ನಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ವಾಂಗಿಬಾತ್ ಸವಿಯಲು ಸಿದ್ಧ.

RELATED ARTICLES  ಸಂಸಾರದಲ್ಲಿ ಹೆಚ್ಚು ಚಿಂತೆ ಮಾಡುವವರೇ ಒಮ್ಮೆ ಶ್ರೀಧರರ ನುಡಿ ಓದಿ.