ಬೇಕಾಗುವ ಸಾಮಾಗ್ರಿಗಳು :
*ನಿಪ್ಪಟ್ಟು – 3 ಅಥವಾ 4
*ಟೊಮೇಟೊ – 1
*ಮಂಡಕ್ಕಿ/ಹುರಿಯಕ್ಕಿ – 1 ಕಪ್
*ಹುರಿದ ಕಡಲೆ – 3 ಚಮಚ
*ಚಾಟ್ ಮಸಾಲಾ – 1 ಚಮಚ
*ಹಸಿಮೆಣಸಿನ ಚಟ್ನಿ – 1/2 ಚಮಚ
*ಮೆಣಸಿನ ಹುಡಿ – 1/2 ಚಮಚ
*ಈರುಳ್ಳಿ – 1
*ಕೊತ್ತಂಬರಿ ಸೊಪ್ಪು – 3 ಎಸಳು
*ಕ್ಯಾರೇಟ್ – 1 (ತುರಿದದ್ದು)
*ಲಿಂಬೆ ರಸ – ಕೆಲವು ಹನಿ
*ಸೇವ್ (ಬೇಕಿದ್ದಲ್ಲಿ) 1/2 ಕಪ್

RELATED ARTICLES  ಕಮಂಡಲ ಗಣಪತಿ ದೇವಸ್ಥಾನ

ಮಾಡುವ ವಿಧಾನ
*ಮೊದಲಿಗೆ ನಿಪ್ಪಟ್ಟನ್ನು ತಟ್ಟೆಯಲ್ಲಿರಿಸಿ
*ಕ್ಯಾರೇಟ್, ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ತುಂಡರಿಸಿಕೊಳ್ಳಿ. ಇದನ್ನು ಒಂದು ಪಾತ್ರೆಗೆ ಹಾಕಿ ನಂತರ ಸ್ವಲ್ಪ ಉಪ್ಪು, ಚಾಟ್ ಮಸಾಲಾ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
*ಟೊಮೇಟೊವನ್ನು ದಪ್ಪನೆ ವೃತ್ತಾಕಾರದಲ್ಲಿ ಕತ್ತರಿಸಿಕೊಳ್ಳಿ ಇದನ್ನು ನಿಪ್ಪಟ್ಟಿನ ಮೇಲಿರಿಸಿ ಇದಕ್ಕೆ ಹಸಿಮೆಣಸಿನ ಚಟ್ನಿ, ಸ್ವಲ್ಪ ಮೆಣಸಿನ ಹುಡಿ, ಚಾಟ್ ಮಸಾಲಾವನ್ನು ಹಾಕಿ.
*ನಂತರ ಕ್ಯಾರೇಟ್, ಈರುಳ್ಳಿ, ಕೊತ್ತಂಬರಿ ಸೊಪ್ಪು ಮಿಶ್ರಣವನ್ನು ಇದರ ಮೇಲೆ ಉದುರಿಸಿ, ಕೊನೆಗೆ ಲಿಂಬೆ ಹನಿಯನ್ನು ಹಿಂಡಿ. *ಕೂಡಲೇ ಮಂಡಕ್ಕಿ/ಹುರಿಯಕ್ಕಿಯನ್ನು ಮೇಲ್ಭಾಗದಲ್ಲಿ ಹಾಕಿ.
*ರುಚಿಯಾದ ನಿಪ್ಪಟ್ಟು ಮಸಾಲೆ ಖಾದ್ಯ ಸವಿಯಲು ಸಿದ್ಧವಾಗಿದೆ. ಸಂಜೆಯ ಹದವಾದ ಚಹಾ ಕಾಫಿಯೊಂದಿಗೆ ಗರಿಗರಿಯಾಗಿ ಸೇವಿಸಲು ನಿಪ್ಪಟ್ಟು ಮಸಾಲೆ ಉತ್ತಮವಾಗಿದೆ.

RELATED ARTICLES  ಸಿಹಿ ಅಮಟೆಕಾಯಿ ಪಕೋಡ ಮಾಡುವುದು ಹೀಗೆ.!