ಎಳ್ಳಿನಲ್ಲಿ ಬಾಯಿಯ ದುರ್ವಾಸನೆ ಹೋಗಲಾಡಿಸುವ ಔಷಧಿಯ ಗುಣವಿದೆ. ವಾರಕ್ಕೆ ಒಮ್ಮೆಯಾದರೂ ಎಳ್ಳನ್ನ ಮಾಡಿ ಸೇವಿಸುವುದರಿಂದ ದುರ್ವಾಸನೆ ನಿವಾರಣೆಯಾಗುತ್ತದೆ.
ಸಾಮಗ್ರಿಗಳು
1. ಅನ್ನ – ಒಂದು ಕಪ್
2. ಹುಣಸೇ ಹಣ್ಣಿನ ರಸ – 2 ಸ್ಪೂನ್
3. ಬೆಲ್ಲ – 2 ಸ್ಪೂನ್
4. ಅರಿಶಿನ – ಸ್ವಲ್ಪ
5. ಖಾರದ ಪುಡಿ – 1 ಸ್ಪೂನ್
6. ಗೋಡಂಬಿ – 25 ಗ್ರಾಂ
7. ಎಣ್ಣೆ – ಒಂದು ಸ್ಪೂನ್
8. ಎಳ್ಳು – 2 ಸ್ಪೂನ್
9. ಒಣಮೆಣಸಿನ ಕಾಯಿ – 2
10. ಉದ್ದಿನ ಬೇಳೆ – ಒಂದು ಸ್ಪೂನ್
11. ಕರಿಬೇವು – ಸ್ವಲ್ಪ
ಮಾಡುವ ವಿಧಾನ: ಮೊದಲು ಬಿಳಿ ಎಳ್ಳನ್ನು ಬಾಣಲೆಯಲ್ಲಿ ಎಣ್ಣೆ ಹಾಕದೇ ಹುರಿದಿಟ್ಟುಕೊಳ್ಳಿ. ಇದು ಪಕ್ಕಕ್ಕಿರಲಿ. ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಉದ್ದಿನ ಬೇಳೆ, ಒಣಮೆಣಸಿನ ಕಾಯಿ, ಗೋಡಂಬಿ, ಕರಿಬೇವು ಸೇರಿಸಿ ಹುರಿಯಿರಿ. ಇದಕ್ಕೆ ಅರಿಶಿನ, ಖಾರದ ಪುಡಿ, ಉಪ್ಪು, ಬೆಲ್ಲ, ಹಾಗೂ ಹುಣಸೆ ರಸ ಹಾಕಿ ಕುದಿಸಿ. ಆಮೇಲೆ ಅನ್ನ ಸೇರಿಸಿ ಕಲಸಿ. ಕೊನೆಗೆ ಹುರಿದ ಎಳ್ಳನ್ನು ಉದುರಿಸಿ ಮತ್ತೊಮ್ಮೆ ಕಲಸಿ.