ಆ್ಯಪಲ್ ರವಾ ಹಲ್ವಾ ವು ಅತ್ಯಂತ ರುಚಿಕರವಾಗಿ ಮೃದುವಾಗಿದ್ದು, ಮಕ್ಕಳು ಇಷ್ಟಪಟ್ಟು ಸವಿಯುತ್ತಾರೆ. ಇದನ್ನು ಮನೆಯಲ್ಲಿ ಸಿಗುವ ವಸ್ತುಗಳಿಂದ ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:

1 ಕಪ್ ತುರಿದ ಸೇಬುಹಣ್ಣು
1/2 ಕಪ್ ರವೆ
3/4 ಕಪ್ ಸಕ್ಕರೆ
2 ಟೇಬಲ್ ಚಮಚ ತುಪ್ಪ
ಫುಡ್‌ ಕಲರ್

RELATED ARTICLES  ಹಲಸಿನ ಕಾಯಿ ಹೊದಿಗಡ್ಡೆ ಪಲ್ಯ.

ತಯಾರಿಸುವ ವಿಧಾನ:

ಒಂದು ಬಾಣಲೆಯಲ್ಲಿ ತುಪ್ಪ ವನ್ನು ಕಾಯಿಸಿ, ಅದರಲ್ಲಿ ರವೆಯನ್ನು ಕೆಂಪು ಬಣ್ಣ ಬರುವವರೆಗೆ ಹುರಿಯಿರಿ. ಇದಕ್ಕೆ ತುರಿದ ಸೇಬು, ಸಕ್ಕರೆ, ಫುಡ್ ಕಲರ್ ಹಾಕಿ ಚೆನ್ನಾಗಿ ಬಾಡಿಸಿ. ಇದು ಕೈಗೆ ಅಂಟದೆ ಇರುವವರೆಗೂ ಮಗುಚುತ್ತಿರಿ. ಈಗ ಇದನ್ನು ಒಂದು ಬಟ್ಟಲಿಗೆ ಹಾಕಿ, ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು ತಣ್ಣಗಾಗಲು ಬಿಡಿ. ಈಗ ಈ ರುಚಿಯಾದ ಹಲ್ವಾ ವನ್ನು ಮಕ್ಕಳು ಚಪ್ಪರಿಸಿಕೊಂಡು ತಿನ್ನುತ್ತಾರೆ.

RELATED ARTICLES  ಮಲೈ ಕೋಫ್ತಾ ಮಾಡಿ ಸವಿಯಿರಿ!