ಬೇಕಾಗುವ ಪದಾರ್ಥಗಳು

ರಾಗಿ ಹಿಟ್ಟು – 1 ಬಟ್ಟಲು
ತೆಂಗಿನ ತುರಿ – ಅರ್ಧ ಬಟ್ಟಲು
ಮೊಸರು – ಅರ್ಧ ಬಟ್ಟಲು
ನೀರು – ಅಗತ್ಯಕ್ಕೆ ಅನುಸಾರವಾಗಿ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯಕ್ಕೆ ಅನುಸಾರವಾಗಿ

RELATED ARTICLES  ರುಚಿಯಾದ ಮೆದು ಉದ್ದಿನವಡೆ ಮಾಡಿ ಸವಿಯಿರಿ!!

ಮಾಡುವ ವಿಧಾನ…

ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಆದಕ್ಕೆ ರಾಗಿ ಹಿಟ್ಟು, ತೆಂಗಿನ ತುರಿ, ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಮತ್ತೆ ಸ್ವಲ್ಪ ನೀರು ಹಾಕಿ ದೋಸೆ ಹಿಟ್ಟಿನಂತೆ ಕಲಸಿಕೊಳ್ಳಬೇಕು.

RELATED ARTICLES  ಬಿಸಿ ಬಿಸಿ ಈರುಳ್ಳಿ ದೋಸೆ ! ಮಾಡುವುದು ಬಹಳ ಸುಲಭ!

ಒಲೆಯ ಮೇಲೆ ತವಾ ಇಟ್ಟು ಕಾಯಬಿಟ್ಟು. ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಮಿಶ್ರಣ ಮಾಡಿಕೊಂಡ ರಾಗಿ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲಿ ಕೆಂಪಗೆ ಸುಟ್ಟರೆ ರುಚಿಕರ ಹಾಗೂ ಆರೋಗ್ಯಕರವಾದ ರಾಗಿ ದೋಸೆ ಸವಿಯಲು ಸಿದ್ಧ.