ಚಳಿಗಾಲದಲ್ಲಿ ಎಲ್ಲವೂ ಬಿಸಿಬಿಸಿಯಾಗಿರುವುದು ಬೇಕೆನಿಸುವುದು. ಆದರೆ ಕೆಲವು ಆರೋಗ್ಯಕ್ಕೆ ಹಿತಕಾರಿಯಾದರೂ ಇನ್ನು ಕೆಲವು ಆರೋಗ್ಯ ಕೆಡಿಸಬಲ್ಲದು. ಆದರೆ ಕೆಲವೊಂದು ಸೂಪ್ ಗಳು ಚಳಿಗಾಲದಲ್ಲಿ ಕುಡಿಯಲು ತುಂಬಾ ರುಚಿಕರ ಹಾಗೂ ಇಷ್ಟವಾಗುವುದು. ಆದರೆ ನಾಲಗೆಗೂ ರುಚಿಸುವ ಮತ್ತು ಆರೋಗ್ಯಕ್ಕೂ ಒಳ್ಳೆಯದಾಗಿರುವಂತಹ ರಸಂನ್ನು ತಯಾರಿಸಿ ಚಳಿಗಾಲದಲ್ಲಿ ಸೇವಿಸಿದರೆ ಚಳಿ ಮೈಬಿಟ್ಟು ದೂರ ಹೋಗುವುದರಲ್ಲಿ ಸಂಶಯವೇ ಇಲ್ಲ. ರಸಂ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಯಿರಿ.

ಬೇಕಾಗುವ ಸಾಮಗ್ರಿಗಳು
1.5-2 ಕಪ್ ನಷ್ಟು ಕತ್ತರಿಸಿರುವ ಟೊಮೆಟೋ
ಒಂದು ಹಿಡಿಯಷ್ಟು ಕತ್ತರಿಸಿಕೊಂಡಿರುವ ಕೊತ್ತಂಬರಿ ಸೊಪ್ಪು
ಹುಳಿ(ಬೇಕಿದ್ದರೆ ಮಾತ್ರ)
1/2-1 ಚಮಚ ಬೆಲ್ಲ ಅಥವಾ ಸಕ್ಕರೆ(ಅನಿವಾರ್ಯವಲ್ಲ)
ಒಂದುವರೆ ಚಮಚ ಎಣ್ಣೆ
1 ಈರುಳ್ಳಿ ಎಲೆ ಗಿಡ
1/2 ಚಮಚ ಸಾಸಿವೆ
1/2 ಜೀರಿಗೆ
1 ಕೆಂಪು ಮೆಣಸು(ತುಂಡು ಮಾಡಿ)
3-4 ಬೆಳ್ಳುಳ್ಳಿ ಎಸಲು(ಬೇಕಿದ್ದರೆ ಮಾತ್ರ)
ಒಂದೆರಡು ಚಿಟಿಕೆ ಅರಶಿನ
1 ಚಮಚ ಬೆಲ್ಲ
ರುಚಿಗೆ ತಕ್ಕಷ್ಟು ಉಪ್ಪು
2.5 ರಿಂದ 3 ಕಪ್ ನೀರು
ಸ್ವಲ್ಪ ಕರಿಬೇವಿನ ಎಲೆ

RELATED ARTICLES  ರುಚಿಕರವಾದ ಮಸಾಲೆ ಬಾತ್.....

ಹುರಿದು ಪುಡಿ ಮಾಡಲು
1/4 ಚಮಚ ಮೆಂತ್ಯೆ ಕಾಳು
1/4 ಚಮಚ ಕರಿಮೆಣಸಿನ ಹುಡಿ
ಒಂದುವರೆ ಚಮಚ ಜೀರಿಗೆ

ತಯಾರಿಸುವ ವಿಧಾನ
1. ಒಣ ಜೀರಿಗೆ, ಕರಿಮೆಣಸು, ಮೆಂತ್ಯೆ ಮತ್ತು ಕೆಂಪು ಮೆಣಸನ್ನು ಹುರಿಯಿರಿ. ಇದು ತಣ್ಣಗಾದ ಬಳಿಕ ಹುಡಿ ಮಾಡಿ.
2. ಸಣ್ಣ ಬಾಣಲೆಗೆ ಸಾಸಿವೆ, ಜೀರಿಗೆ, ಕೆಂಪು ಮೆಣಸನ್ನು ಎಣ್ಣೆಯಲ್ಲಿ ಹುರಿದು ಸಿಡಿಯುವ ತನಕ ಹಾಗೆ ಬಿಡಿ.
3. ಬೆಳ್ಳುಳ್ಳಿ, ಕರಿಬೇವಿನ ಎಲೆ ಮತ್ತು ಹಿಂಗು ಹಾಕಿ.
4. ಟೊಮೆಟೋ ಗೆ ಉಪ್ಪು ಮತ್ತು ಅರಶಿನ ಹಾಕಿ ಹುರಿಯಿರಿ.
5. ತಯಾರಿಸಿದ ಹುಡಿ ಹಾಕಿ ಎರಡು ನಿಮಿಷ ಹುರಿಯಿರಿ.
6. ನೀರು, ಹುಳಿ, ಬೆಲ್ಲ ಮತ್ತು ಬೇಕಿದ್ದರೆ ಉಪ್ಪು ಹಾಕಿ.
7. ಐದು ನಿಮಿಷ ಕಾಲ ಕುದಿಸಿ ಮತ್ತು ಅದು ದಪ್ಪವಾಗಲಿ.
8. ಕೊತ್ತಂಬರಿ ಸೊಪ್ಪು ಹಾಕಿ. ಬಾಕಿ ಮುಚ್ಚಿ ಬೆಂಕಿ ನಂದಿಸಿ.

RELATED ARTICLES  ಅಕ್ಕಿ ರೊಟ್ಟಿ ಮಾಡುವ ಸುಲಭ ವಿಧಾನ……..!!