ಬೆಳಗ್ಗಿನ ಬ್ರೇಕ್‌ ಪಾಸ್ಟ್‌ ತಯಾರಿಸುವುದು ಒಂದು ದೊಡ್ಡ ಸವಾಲಿನ ಕೆಲಸ. ಸಾಮಾನ್ಯವಾಗಿ ಸುಲಭವಾಗಿ ಅಕ್ಕಿಯಿಂದ ಮಾಡುವ ತಿಂಡಿಗಳಾದ ಪಲಾವ್‌, ಚಿತ್ರಾನ್ನ, ಪುಳಿಯೊಗರೆ ಬೇಗನೆ ಆಗುತ್ತದೆ ಅಂತ ನಾವು ಅದನ್ನೇ ಮಾಡುತ್ತೇವೆ.

ಆದರೆ ಯಾವಾಗಲೂ ಅನ್ನದ ಐಟಂ ತಿಂದು ಬೇಜಾರಾಗುತ್ತದೆ, ಮಕ್ಕಳು ಚಪಾತಿ ಬೇಕೆನ್ನಬಹುದು, ಇಲ್ಲ ತೂಕ ಕಡಿಮೆಮಾಡಿಕೊಳ್ಳು ಚಪಾತಿ ತಿನ್ನಬೇಕೆಂದು ನಿಮಗೂ ಅನಿಸಬಹುದು. ಆದರೆ ಬೆಳಗ್ಗೆ ಆಫೀಸ್‌ಗೆ ಹೊತ್ತಾಗುತ್ತಿರುವಾಗ ಚಪಾತಿ ಹಿಟ್ಟನ್ನು ಕಲಿಸಿಕೊಂಡು ಕೂರುವವರು ಯಾರು ಎಂಬ ಚಿಂತೆಯೇ? ಡೋಂಟ್‌ ವರಿ ಈ ಟಿಪ್ಸ್‌ ಚಪಾತಿ ಹಿಟ್ಟನ್ನು ವಾರದವರೆಗೆ ಫ್ರೆಶ್‌ ಆಗಿ ಇಡಲು ಸಹಾಯ ಮಾಡುತ್ತದೆ.

ಹಿಟ್ಟನ್ನು ಮಾಡಿ ಫ್ರಿಜ್‌ನಲ್ಲಿಟ್ಟರೆ ಚಪಾತಿ ಬೇಕು ಅನಿಸಿದಾಗೆಲ್ಲಾ ಮಾಡಿ ತಿನ್ನಬಹುದು:

ಚಪಾತಿಗೆ ಹಿಟ್ಟು ಕಲಿಸುವಾಗ ಬಿಸಿ ನೀರಿನ ಬದಲು ತಣ್ಣೀರು ಬಳಸಿ ಕಲೆಸಿದರೆ ಹಿಟ್ಟು ಹೆಚ್ಚು ಸಮಯ ಫ್ರೆಶ್‌ ಆಗಿರುತ್ತದೆ.
ಚಪಾತಿಗೆ ಹಿಟ್ಟು ಕಲೆಸುವಾಗ 2-3 ಚಮಚ ಎಣ್ಣೆ ಹಾಕಿ ಕಲೆಸಿ.
ರುಚಿಗೆ ತಕ್ಕ ಉಪ್ಪು ಹಾಕಿ ಕಲೆಸಿ.
ನಂತರ ಅದನ್ನು ಒಂದು ಪ್ಲಾಸ್ಟಿಕ್‌ ಕವರ್‌ನಲ್ಲಿ ಹಾಕಿ ಫ್ರಿಜ್‌ನಲ್ಲಿಡಿ.
ಚಪಾತಿಯನ್ನು ಆಗಲೇ ಮಾಡಿ ತಿನ್ನುವುದಾದರೆ ಬಿಸಿ ನೀರು, ಸ್ವಲ್ಪ ಹಾಲು, ಉಪ್ಪು, ಎಣ್ಣೆ ಹಾಕಿ ಕಲೆಸಿದರೆ ಚಪಾತಿ ತುಂಬಾ ಮೆದುವಾಗಿರುತ್ತದೆ.