ಬೇಕಾಗುವ ಪದಾರ್ಥಗಳು
ಕೊತ್ತಂಬರಿ ಸೊಪ್ಪು – 1 ಬಟ್ಟಲು
ಪುದೀನಾ – ಅರ್ಧ ಬಟ್ಟಲು
ಬೆಳ್ಳುಳ್ಳಿ – 3 ಎಸಳು
ಶುಂಠಿ – 3 ಇಂಚು
ಹಸಿಮೆಣಸಿನ ಕಾಯಿ – 3-4
ಹುರಿಗಡಲೆ – 2 ಚಮಚ
ಜೀರಿಗೆ ಪುಡಿ – ಅರ್ಧ ಚಮಚ
ಚಾಟ್ ಮಸಾಲಾ – 1 ಚಮಚ
ಸಕ್ಕರೆ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಇಂಗು – ಚಿಟಿಕೆ
ನಿಂಬೆ ರಸ – 1 ಚಮಚ
ಮಾಡುವ ವಿಧಾನ
ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಕೊತ್ತಂಬರಿ ಸೊಪ್ಪು, ಪುದೀನಾ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನ ಕಾಯಿ, ಹುರಿಗಡಲೆ, ಜೀರಿಗೆ ಪುಡಿ, ಚಾಟ್ ಮಸಾಲಾ, ಸಕ್ಕರೆ, ಉಪ್ಪು, ಇಂಗು, ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.
ರುಬ್ಬಿದ ಮಿಶ್ರಣವನ್ನು ತೆಗೆದುಕೊಂಡು ಬಟ್ಟಲಿಗೆ ಹಾಕಿಕೊಂಡು ಅದಕ್ಕೆ ಸ್ವಲ್ಪ ನಿಂಬೆರಸವನ್ನು ಹಾಕಿದರೆ, ರುಚಿಕರವಾದ ಗ್ರೀನ್ ಚಟ್ನಿ ಸವಿಯಲು ಸಿದ್ಧ.

RELATED ARTICLES  ಮನೆಯಲ್ಲೆ ಮಾಡಬಹುದಾದ ಪಿಜ್ಜಾ.