ಹಲ್ವ ಎಂದರೆ ಸಾಕು ಎಂತಹವರ ಬಾಯಲ್ಲೂ ನೀರೂರುತ್ತದೆ. ಅದರಲ್ಲೂ ಬಾಳೆ ಹಣ್ಣಿನ ಹಲ್ವ ಅಂದ್ರೆ ಆ ರುಚಿಯ ಮಜವೇ ಬೇರೆ! ಈ ಬಾರಿ ಪ್ರಜಾವಾಣಿಯು ನೇಂದ್ರ ಬಾಳೆ ಹಣ್ಣಿನ ಹಲ್ವ ಮಾಡುವ ರೆಸಿಪಿಯನ್ನು ತಂದಿದೆ. ಹಲ್ವ ಮಾಡುವ ವಿಧಾನಕ್ಕೆ ಪ್ರಜಾವಾಣಿ ರೆಸಿಪಿ ವಿಡಿಯೊ ನೋಡಿ.

ಸಾಮಗ್ರಿಗಳು
1. ನೇಂದ್ರ ಬಾಳೆ ಹಣ್ಣು – 1
2. ಸಕ್ಕರೆ – 1/2 ಕಪ್
3. ತುಪ್ಪ – 1/2 ಕಪ್
4. ಗೋಡಂಬಿ, ದ್ರಾಕ್ಷಿ – 25 ಗ್ರಾಂ
5. ಏಲಕ್ಕಿ ಪುಡಿ – ಸ್ವಲ್ಪ

RELATED ARTICLES  ಗ್ರೀನ್ ಚಟ್ನಿ

ಮಾಡುವ ವಿಧಾನ: ನೇಂದ್ರ ಬಾಳೆ ಹಣ್ಣನ್ನು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ. ಬಾಣಲೆಯಲ್ಲಿ ಗೋಡಂಬಿ ದ್ರಾಕ್ಷಿಗಳನ್ನು ತುಪ್ಪ ಹಾಕಿ ಹುರಿಯಿರಿ. ಇದು ಪಕ್ಕಕ್ಕಿರಲಿ. ಈಗ ಒಂದು ಬಾಣಲೆಯಲ್ಲಿಸಕ್ಕರೆ ಹಾಕಿ, ನೀರು ಸೇರಿಸಿ ಪಾಕ ಮಾಡಿಕೊಳ್ಳಿ. ಈ ಸಕ್ಕರೆ ಪಾಕಕ್ಕೆ, ರುಬ್ಬಿಕೊಂಡ ನೇಂದ್ರ ಬಾಳ ಹಣ್ಣನ್ನು ಹಾಕಿ ಕಲಸಿ. ಸ್ವಲ್ಪ ತುಪ್ಪವನ್ನೂ ಸೇರಿಸಿ 5-6 ನಿಮಿಷಗಳವರೆಗೆ ಕುದಿಸಿ.

RELATED ARTICLES  ಶಂಕರಪೋಳೆ ಮಾಡುವುದು ಎಷ್ಟು ಸುಲಭ ಅಂತೀರಾ!

ಇನ್ನೂ ಸ್ವಲ್ಪ ತುಪ್ಪ ಹಾಕಿ ಹಾಕಿ ಚೆನ್ನಾಗಿ ಮೊಗಚಿ. ಪಾತ್ರೆ ಬಿಡುವವರೆಗೆ ಕುದಿಸಿ, ಕೊನೆಯಲ್ಲಿ ಮಿಕ್ಕ ತುಪ್ಪ, ಏಲಕ್ಕಿ ಪುಡಿ ಹಾಕಿ ಚೆನ್ನಾಘಿ ಕಲಸಿ ಇಳಿಸಿ. ಒಂದು ಬೌಲ್ ಅಥವಾ ಪ್ಲೇಟ್ ಗೆ ಹಾಕಿ, ಮೊದಲೇ ಹುರಿದಿಟ್ಟುಕೊಂಡ ದ್ರಾಕ್ಷಿ ಗೋಡಂಬಿಗಳಿಂದ ಅಲಂಕರಿಸಿ.