ನಿಮಗೆ ಆ್ಯಪಲ್ ಎಂದರೆ ಬಹಳ ಇಷ್ಟ. ಆದರೆ ಪ್ರತಿದಿನ ಆ್ಯಪಲ್‌ಅನ್ನು ಹಾಗೇ ತಿನ್ನಲು ಬೇಸರ ಎನಿಸಿದಲ್ಲಿ ಈ ಸುಲಭವಾದ ಆ್ಯಪಲ್ ಸಿನಮನ್ ಕೇಕ್ ತಯಾರಿಸಿ ತಿನ್ನಿ.
ಸಾಮಗ್ರಿಗಳು
ಸಕ್ಕರೆ – 1 ಕಪ್
ಸೇಬು – 1 ಕಪ್
ಮೈದಾಹಿಟ್ಟು 1 1/2 ಕಪ್
ಚೆಕ್ಕೆ ಪುಡಿ – 1 /2 tsp.
ಮೊಟ್ಟೆ – 2
ಬೆಣ್ಣೆ – 3 tbsp.
ಜೇನು ತುಪ್ಪ – 1 tbsp.
ಉಪ್ಪು – ಚಿಟಿಕೆ
ತಯಾರಿಸುವ ವಿಧಾನ
ಮೊದಲು ಬೆಣ್ಣೆ ಮತ್ತು ಸಕ್ಕರೆಯನ್ನು ಒಂದು ಬೌಲ್‌ಗೆ ಹಾಕಿ ಸಕ್ಕರೆ ಬೆಣ್ಣೆಯಲ್ಲಿ ಕರಗುವರೆಗೂ ವಿಸ್ಕ್ ಮಾಡಿ, ನಂತರ ಮೊಟ್ಟೆ ಹಾಕಿ ನೊರೆ ಬರುವರೆಗೂ ವಿಸ್ಕ್ ಮಾಡಿಕೊಳ್ಳಿ.
ಈ ಮಿಶ್ರಣಕ್ಕೆ ಮೈದಾಹಿಟ್ಟು ಹಾಕಿ ಒಂದೊಂದೇ ಸ್ಪೂನ್ ಹಾಕಿಕೊಂಡು ಗಂಟಿಲ್ಲದಂತೆ ತಿರುವಿ, ನಂತರ ಸಣ್ಣಗೆ ಕತ್ತರಿಸಿದ ಆ್ಯಪಲ್, ಜೇನುತುಪ್ಪ, ಚೆಕ್ಕೆ ಪುಡಿ, ಉಪ್ಪು ಹಾಕಿ ಚೆನ್ನಾಗಿ ಬೆರೆಸಿ ಬೇಕಿಂಗ್ ಪಾತ್ರೆಗೆ ಸಮನಾಗಿ ಹರಡಿ 175 ಡಿಗ್ರಿ ಸೆಲ್ಸಿಯಸ್‌ನಲ್ಲಿ 35 ನಿಮಿಷ ಬೇಕ್ ಮಾಡಿ.35 ನಿಮಿಷದ ನಂತರ ಓವನ್‌ನಿಂದ ಕೇಕ್ ಹೊರತೆಗೆದು ಕಟ್ ಮಾಡಿ ತಿನ್ನಿ. ಇದನ್ನು ನೀವು ಬ್ರೇಕ್‌ಫಾಸ್ಟ್ ಅಥವಾ ಸ್ನ್ಯಾಕ್ಸ್‌ಗೆ ಕೂಡಾ ತಿನ್ನಬಹುದು.