Satwadhara News

Category: Local News

  • ಉತ್ತರಕನ್ನಡದ ಪ್ರಮುಖ ಸುದ್ದಿಗಳು

    ಉತ್ತರಕನ್ನಡದ ಪ್ರಮುಖ ಸುದ್ದಿಗಳು

    ಬೈಕಿನಲ್ಲಿ ಸಾಗುತ್ತಿದ್ದ ಯುವಜೋಡಿಯ ಮೇಲೆ ಹಲ್ಲೆ

    ಭಟ್ಕಳ: ತಾಲೂಕಿನ ಮನ್ಕುಳಿ ಪೆಟ್ರೋಲ್ ಪಂಪ್ ಎದುರು ಬೈಕಿನಲ್ಲಿ ಸಾಗುತ್ತಿದ್ದ ಯುವಜೋಡಿಯ ಮೇಲೆ ಯುವತಿಯ ಪರಿಚಯಸ್ಥರು ಹಲ್ಲೆ ನಡೆಸಿದ ಘಟನೆ ನಡೆದಿದೆ.

    ಗುಳ್ಮಿಯ ಯುವತಿಯನ್ನು ರಾಜಸ್ತಾನದ ಮೂಲದ ಯುವಕನೊರ್ವ ಕರೆದುಕೊಂಡು ಹೋಗಲು ಅಟೋ ರಿಕ್ಷಾವೊಂದನ್ನು ಕರೆಸಿದ್ದಾನೆ. ಯುವತಿ ಆಟೋ ಹತ್ತಿ ಯುವಕ ತಿಳಿಸಿದ ಸ್ಥಳಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ಸ್ಥಳಕ್ಕೆ ಬಂದ ಯುವತಿಯ ಪರಿಚಯಸ್ಥರು ಯುವಕನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ.

    ಹಾಡು ಹಗಲಿನಲ್ಲಿ ಯುವಕನೊರ್ವನನ್ನು ಹೆದ್ದಾರಿ ಬದಿಯಲ್ಲಿ ಹಿಡಿದು ಥಳಿಸುತ್ತಿರುವುದನ್ನು ನೋಡಿದ ಜನ ಹಲ್ಲೆ ನಡೆಸುತ್ತಿದ್ದ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಲ್ಲೆ ನಡೆಸಲು ನಿಮಗೆ ಅಧಿಕಾರ ಕೊಟ್ಟವರ‍್ಯಾರು ಎಂದು ಮಾತಿನ ಚಕಮಕಿ ನಡೆದಿದೆ.

    ಓಲಿವ್ ರೆಡ್ಲಿ ಜಾತಿಯ ಆಮೆ ಮೃತ ಶರೀರ ಪತ್ತೆಯಾಗಿದೆ.

    ಹೊನ್ನಾವರ: ತಾಲೂಕಿನ ಕಾಸರಕೋಡು, ಟೊಂಕ ಕಡಲತೀರದ ಉದ್ದೇಶಿತ ವಾಣಿಜ್ಯ ಬಂದರು ನಿರ್ಮಾಣ ಪ್ರದೇಶದಲ್ಲಿ ಓಲಿವ್ ರೆಡ್ಲಿ ಜಾತಿಯ ಆಮೆಯ ಮೃತ ಶರೀರ ಪತ್ತೆಯಾಗಿದೆ. ಅದರ ಹೊಟ್ಟೆ ಭಾಗದಲ್ಲಿ ಗಾಯವಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹೊನ್ನಾವರ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಮೃತ ಆಮೆಯನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದಾರೆ.

    ವಿಕಲಚೇತನನ ನಾಲ್ಕು ಚಕ್ರದ ಬೈಕ್ ಪಲ್ಟಿ : ಗಂಭೀರ ಗಾಯ

    ನಿಯಂತ್ರಣ ತಪ್ಪಿ ವಿಕಲಚೇತನನ ನಾಲ್ಕು ಚಕ್ರದ ಬೈಕ್ ಪಲ್ಟಿಯಾದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಪಟ್ಟಣದ ಹೆರವಟ್ಟಾದ ರೈಲ್ವೆ ಬ್ರಿಡ್ಜ್ ಬಳಿ ಇಂದು ಸಂಭವಿಸಿದೆ.

    ಕುಮಟಾ ತಾಲೂಕಿನ ವಾಲಗಳ್ಳಿ ಗ್ರಾಪಂ
    ವ್ಯಾಪ್ತಿಯ ಕಲಕೇರಿ ನಿವಾಸಿ ಸಾಂತಪ್ಪರಾಮ ಗೌಡ ಗಾಯಗೊಂಡ ಸವಾರ, ಈತ ಕುಮಟಾ ಕಡೆಯಿಂದ ಚಂದಾವರ ಕಡೆಗೆ ಅತಿವೇಗ ಹಾಗೂ ನಿಷ್ಕಾಳಜಿಯಿಂದ ತನ್ನ ನಾಲ್ಕು ಚಕ್ರದ ಬೈಕ್ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಾಲುವೆಯಲ್ಲಿ ಪಲ್ಟಿಯಾಗಿದೆ. ಸವಾರ ಗಂಭೀರ ಗಾಯಗೊಂಡಿದ್ದು, ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೊನ್ನಾವರದ ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ

    ಹೊನ್ನಾವರದ ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ

    ಹೊನ್ನಾವರದ ಕಾಸರಕೋಡು 33 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಕಾಮಗಾರಿ ನಿಮಿತ್ತ ಸೆಪ್ಟೆಂಬರ್ 15 ಬುಧವಾರದ ಹೊನ್ನಾವರದ ಕೆಲವು ಪ್ರದೇಶಗಳಿಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಕಾಸರಕೋಡು ಶಾಖೆಯ ಕೆಳಗಿನೂರು, ಗುಣವಂತೆ, ಬಳಕೂರು, ಇಡಗುಂಜಿ, ಮಾಳ್ಕೋಡ ಮತ್ತು ಮಂಕಿ ಪಂಚಾಯತಿ ವ್ಯಾಪ್ತಿಯಲ್ಲಿ ಹಾಗೂ ಗೇರುಸುಪ್ಪಾ 33 ಕೆವಿ ವ್ಯಾಪ್ತಿಯ ರೈಟ್, ಲೆಫ್ಟ್, ಕಾಲೋನಿ, ಉಪ್ಪೋಣಿ ಮತ್ತು ಮಾಗೋಡು ಫೀಡರುಗಳಲ್ಲಿ ಬೆಳಿಗ್ಗೆ ೧೦ರಿಂದ ಮದ್ಯಾನ ೨ ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

  • ಉತ್ತರಕನ್ನಡದ ಪ್ರಮುಖ ಸುದ್ದಿಗಳು

    ಉತ್ತರಕನ್ನಡದ ಪ್ರಮುಖ ಸುದ್ದಿಗಳು

    ಕಡಲ ತೀರದಲ್ಲಿ ಅಪರಿಚಿತ ಶವ ಪತ್ತೆ‌

    ಗೋಕರ್ಣ ಗಂಗೆಕೊಳ್ಳದ ಕಡಲತೀರದಲ್ಲಿ ಭಾನುವಾರ ಮುಂಜಾನೆ ಅಪರಿಚಿತ ಶವವೊಂದು ಪತ್ತೆಯಾಗಿದೆ. 40 ರಿಂದ 45 ವರ್ಷ ವಯಸ್ಸಿನ ಪುರುಷನ ಶವ ಎಂದು ಅಂದಾಜಿಸಲಾಗಿದ್ದು, ಕಳೆದ ಎರಡು ದಿನದ ಹಿಂದೆ ಮೃತಪಟ್ಟಿರಬಹುದು ಎಂದು ತಿಳಿದುಬಂದಿದೆ. ಮುಂಜಾನೆ ಗಂಗೆಕೊಳ್ಳದ ಕಡಲತೀರದಲ್ಲಿ ಶವ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದು, ಶವನ್ನು ಗೋಕರ್ಣದ ಶವಾಗಾರಕ್ಕೆ ಸಾಗಿದ್ದಾರೆ.

    ಅಪಘಾತದಲ್ಲಿ ಗರ್ಭಾವಸ್ಥೆಯಲ್ಲಿದ್ದ ಹಸು ಸಾವು

    ಕಾರವಾರ ತಾಲೂಕಿನ ಚೆಂಡಿಯಾದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದಿಂದ ಮೂರು ಜಾನುವಾರು ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ಬೆಳಗ್ಗಿನ ಜಾವ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ಭಾರೀ ವಾಹನ ಸಂಚರಿಸುತ್ತವೆ. ಈ ಸಂದರ್ಭಗಳಲ್ಲಿ ಹೆದ್ದಾರಿಯಲ್ಲಿ ದಾಟುವ, ರಸ್ತೆಯಲ್ಲೇ ಮಲಗುವ ಜಾನುವಾರು ಅಪಘಾತಕ್ಕೀಡಾಗುತ್ತಿದೆ. ಅದರಂತೆ ಇಂದು ಸಹ ಚೆಂಡಿಯಾದ ಬಳಿ ಅಪಘಾತ ಸಂಭವಿಸಿದ್ದು ಈ ವೇಳೆ ಗರ್ಭಾವಸ್ಥೆಯಲ್ಲಿದ್ದ ಹಸು ಮೃತಪಟ್ಟಿದೆ.

    ಕುಡಿದು ಗಲಾಟೆ ಮಾಡಿದಾತನ್ನು ಠಾಣೆಗೆ ಕರೆದೊಯ್ದ ಪೊಲೀಸರು

    ನಗರದ ಹಬ್ಬುವಾಡಾದಲ್ಲಿ ವೃದ್ಧ ಮಹಿಳೆಗೆ ಆತನ ಮಗ ಕುಡಿದು ಜಗಳವಾಡುತ್ತಿರುವ ಬಗ್ಗೆ ಪೊಲೀಸರು ವಿಚಾರಣೆ ನಡೆಸಿ ವ್ಯಕ್ತಿಯನ್ನು ನಗರ ಪೊಲೀಸ್ ಠಾಣೆಗೆ ಕರೆದೊಯ್ದ ಘಟನೆ ನಡೆದಿದೆ. ನಗರದ ಹಬ್ಬುವಾಡಾದಿಂದ 112 ಪೊಲೀಸ್ ಸಹಾಯವಾಣಿಗೆ ಸ್ಥಳೀಯರು ಕರೆ ಮಾಡಿದ್ದು ವೃದ್ಧಿಗೆ ಆತನ ಮಗ ಕುಡಿದು ಜಗಳವಾಡುತ್ತಿರುವ ಬಗ್ಗೆ ಬಂದ ಕರೆ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಮದ್ಯದ ನಶೆಯಲ್ಲಿದ್ದ ವ್ಯಕ್ತಿಗೆ ಎಚ್ಚರಿಕೆ ನೀಡಿದರೂ ಸಹ ಕೇಳದಿದ್ದಾಗ ಆತನನ್ನು ನಗರ ಪೊಲೀಸ್ ಠಾಣೆಗೆ ಅಧಿಕಾರಿಗಳು ಒಯ್ದಿದ್ದಾರೆ.

  • ಉತ್ತರಕನ್ನಡದ ಪ್ರಮುಖ ಸುದ್ದಿಗಳು

    ಉತ್ತರಕನ್ನಡದ ಪ್ರಮುಖ ಸುದ್ದಿಗಳು

    ಹದಗೆಟ್ಟ ರಸ್ತೆ ಸರಿಪಡಿಸಲು ಆಗ್ರಹ

    ಕಾರವಾರ: ನೆರೆ ಹಾವಳಿಯ ಸಂದರ್ಭದಲ್ಲಿ ಹಳಗಾ ಉಳಗಾಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ಸ್ಥಳೀಯರ ರಸ್ತೆ ಸಂಚಾರ ದುಸ್ತರವಾಗಿದೆ. ಕಳೆದ 2019ರಲ್ಲಿ ಉಂಟಾದ ಪ್ರವಾಹದ ಕಾರಣದಿಂದ ಹಳಗಾ-ಉಳಗಾದ ಈ ಪ್ರಮುಖ ಮುಖ್ಯ ಸಂಪರ್ಕ ರಸ್ತೆ ಸಂಪೂರ್ಣ ಹಾನಿಗೊಳಗಾಗಿತ್ತು. ಬಳಿಕ ರಸ್ತೆಯ ಅಲ್ಲಲ್ಲಿ ತುಂಡು ಕಾಮಗಾರಿ ಮಾಡಲಾಗಿತ್ತು. ಬಳಿದ ಮತ್ತೆ ಬಂದ ನೆರೆಯಿಂದ ಈಗ ರಸ್ತೆ ಸಂಪೂರ್ಣ ಹಾನಿಗೊಂಡಿದೆ. ರಸ್ತೆಯನ್ನು ಸೂಕ್ತ ರೀತಿಯಲ್ಲಿ ದುರಸ್ತಿ ಮಾಡಬೇಕು ಎಂದು ಆಗ್ರಹ ಸ್ಥಳೀಯರು ಮಾಡಿದ್ದಾರೆ.

    ವಿದ್ಯಾರ್ಥಿಗಳಿಗೆ ನಗದು ಬಹುಮಾನ

    ಕಾರವಾರ: ಪ್ರತಿ ವರ್ಷ ಉತ್ತರಕನ್ನಡ ಜಿಲ್ಲಾ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘವು ತನ್ನ ಸದಸ್ಯರ ಮಕ್ಕಳಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿಜ್ಞಾನ, ವಾಣಿಜ್ಯ ಹಾಗು ಕಲಾ ವಿಭಾಗದಲ್ಲಿ ಗರಿಷ್ಠ ಅಂಕ ಪಡೆದ ಮೊದಲ ಮೂರು ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸುತ್ತಿದೆ. ಅದೇ ರೀತಿ 2021ರ ಸಾಲಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮೊದಲ ಮೂರು ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಿದೆ. ಆಸಕ್ತ ಸದಸ್ಯರು ತಮ್ಮ ಮಕ್ಕಳ ಮಾರ್ಕ್ಸ ಕಾರ್ಡ್ ಪ್ರತಿಯೊಂದಿಗೆ, ಅಧ್ಯಕ್ಷರು, ಉತ್ತರಕನ್ನಡ ಜಿಲ್ಲಾ ಸರ್ಕಾರಿ
    ನೌಕರರ ಪತ್ತಿನ ಸಹಕಾರ ಸಂಘ ನಿಯಮಿತ ಕಾರವಾರ ಇವರಿಗೆ ಸೆ.30ರೊಳಗಾಗಿ ಅರ್ಜಿ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

    ವರ್ಧಮಾನ ಪ್ರಶಸ್ತಿಗೆ ಡಾ. ಜಿ.ಎಂ ಹೆಗಡೆ ಆಯ್ಕೆ.

    ಶಿರಸಿ: ಕಳೆದ 40 ವರ್ಷಗಳಿಂದ ಮೂಡುಬಿದಿರೆಯ ಪ್ರತಿಷ್ಠಿತ ವರ್ಧಮಾನ ಸಾಹಿತ್ಯಪೀಠವು ನೀಡುವ ವರ್ಧಮಾನ ಪ್ರಶಸ್ತಿಗೆ ಈ ಬಾರಿ ತಾಲೂಕಿನ ಆಲ್ಮನೆ ಮಸಗುತ್ತಿಮನೆಯ ಡಾ. ಜಿ.ಎಂ. ಹೆಗಡೆ ಅವರು ಆಯ್ಕೆಯಾಗಿದ್ದಾರೆ. ಕಾಂತಾವರದ ಕನ್ನಡ‌ ಭವನದಲ್ಲಿ ಪ್ರಶಸ್ತಿ ಪೀಠದ ಕಾರ್ಯಾಧ್ಯಕ್ಷ ಎಸ್. ಡಿ.ಸಂಪತ್‌ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ನಾಡಿನೆಲ್ಲೆಡೆಯಿಂದ ಬಂದ ಶಿಫಾರಸುಗಳು ಹಾಗೂ ಸಾಹಿತಿಗಳ ಜೀವಮಾನದ ಸಾಧನೆಯ ಆಧಾರದಲ್ಲಿ ಡಾ. ಬಿ. ಜನಾರ್ದನ ಭಟ್, ಬೆಳಗೋಡು ರಮೇಶ ಭಟ್ ಮತ್ತು ಡಾ.ಎಸ್.ಪಿ. ಸಂಪತ್ ಕುಮಾರ್ ಅವರನ್ನೊಳಗೊಂಡ ತೀರ್ಪುಗಾರರ ಬಳಗ ಈ ಪ್ರಶಸ್ತಿಗಳನ್ನು ನಿರ್ಣಯಿಸಿದೆ ಎಂದು ಪೀಠದ ಪ್ರಧಾನ ನಿರ್ದೆಶಕ ಡಾ. ನಾ. ಮೊಗಸಾಲೆ ತಿಳಿಸಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ವಿಮರ್ಶಕ ಡಾ.ಜಿ. ಎಂ. ಹೆಗ್ಡೆ ಅವರು ಕಳೆದ ಸುಮಾರು 4 ದಶಕಗಳಿಂದ ಧಾರವಾಡದ ಸಾಹಿತ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು ಸಂಶೋಧನೆ ಅಧ್ಯಯನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. 20ಕ್ಕೂ ಅಧಿಕ ವಿಮರ್ಶಕ ಕೃತಿಗಳು, 40 ಸಂಪಾದಿತ ಗ್ರಂಥಗಳು, 400ಕ್ಕೂ ಅಧಿಕ ಪುಸ್ತಕ ವಿಮರ್ಶೆ ನಡೆಸಿರುವ ಹೆಗ್ಗೆ ಸಂಶೋಧನಾ ಮಾರ್ಗದರ್ಶಕರಾಗಿಯೂ ಗುರುತಿಸಿಕೊಂಡಿದ್ದಾರೆ.

  • ಉತ್ತರಕನ್ನಡದ ಪ್ರಮುಖ ಸುದ್ದಿಗಳು ಇಲ್ಲಿದೆ..!

    ಉತ್ತರಕನ್ನಡದ ಪ್ರಮುಖ ಸುದ್ದಿಗಳು ಇಲ್ಲಿದೆ..!

    ಹರಿಕೃಷ್ಣ ರಾಮ ನಾಯಕ ಇನ್ನಿಲ್ಲ

    ಅಂಕೋಲಾ: ತಾಲೂಕಿನ ಲಕ್ಷೇಶ್ವರದ ನಿವಾಸಿ ಹರಿಕೃಷ್ಣ ರಾಮ ನಾಯಕ (57) ಆಕಸ್ಮಿಕವಾಗಿ ನಿಧನರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಅಂದಿನ ರಾಜಕೀಯ ಮುಖಂಡರಾದ ದಿ. ಆರ್. ಜಿ. ನಾಯಕರವರ ಪುತ್ರರಾದ ಇವರು ಸರಳ ಜೀವಿಗಳಾಗಿ ಎಲ್ಲರೊಡನೆ ಸ್ನೇಹ ಬಾಂಧವ್ಯ ಹೊಂದಿದ್ದರು. ಆರ್.ಜಿ. ನಾಯಕರವರು ಕೆನರಾ ಲೋಕಸಭಾ ಕ್ಷೇತ್ರದ ಸದಸ್ಯರಾದ ದಿ.ಜೋಕಿಮ ಆಳ್ವರವರ ಆತ್ಮೀಯರಾಗಿದ್ದರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಅನುಯಾಯಿಗಳಾಗಿದ್ದರು. ಹರಿಕೃಷ್ಣನಾಯಕರವರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.

    ದಿನಸಿ ಕಿಟ್ ವಿತರಣಾ ಸಂದರ್ಭದಲ್ಲಿ ಗೊಂದಲ

    ಅಂಕೊಲಾ: ಕಾರ್ಮಿಕ ಇಲಾಖೆಯಿಂದ‌ ಸರಕಾರ ನೀಡಿರುವ ದಿನಸಿ ಸಾಮಾಗ್ರಿಗಳಿರುವ ಕಿಟ್‌ಗಳನ್ನು ಕಾರ್ಮಿಕ ಇಲಾಖೆ ನೀಡಿತ್ತು. ಆದರೆ ಮಧ್ಯಾಹ್ನದ ವೇಳೆಗೆ ಈ ನೋಂದಾಯಿತ ಕಟ್ಟಡ ಕಾರ್ಮಿಕರನ್ನು ನಿಯಂತ್ರಿಸಲಾಗದೇ ಇಲಾಖೆ ಕಿಟ್ ನೀಡುವುದನ್ನು ಬಂದ್ ಮಾಡಿದ ಘಟನೆ ಅಂಕೋಲಾದಲ್ಲಿ ನಡೆದಿದೆ. ಇಂದು ಕಿಟ್ ವಿತರಿಸುವುದನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದೇವೆ. ದಾಖಲೆ ಪತ್ರಗಳನ್ನು ನೀಡಿದ ಫಲಾನುಭವಿಗಳಿಗೆ ಕಿಟ್ ನೀಡುತ್ತೇವೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಇದರಿಂದ ಬೆಳಗ್ಗೆಯಿಂದ ಕಾದು ಕುಳಿತಿದ್ದ ಕಾರ್ಮಿಕರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

    ವ್ಯಕ್ತಿ ನಾಪತ್ತೆ ದೂರು ದಾಖಲು

    ಕಾರವಾರ: ಯಾವುದೋ ವಿಷಯದಿಂದ ನೊಂದ 75 ವರ್ಷದ ವೃದ್ಧರೊಬ್ಬರು ನಾಪತ್ತೆಯಾಗಿರುವ ಬಗ್ಗೆ ಕಾರವಾರದ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದಿನೇಶ ರಾಮಚಂದ್ರ ಕಾಮತ್ ನಾಪತ್ತೆಯಾಗಿರುವ ವ್ಯಕ್ತಿ, ಮನೆಯಲ್ಲಿ ಯಾರಿಗೂ ಹೇಳದೆ ಗೋವಾ ದಿಕ್ಕಿನತ್ತ ಆ. 16ರಂದು ನಡೆದುಕೊಂಡು ಹೋಗಿದ್ದಾರೆ. ಈವರೆಗೆ ಮನೆಗೆ ವಾಪಸ್ ಬರದೆ ನಾಪತ್ತೆಯಾಗಿದ್ದಾರೆ. ತಮ್ಮಗಂಡನನ್ನು ಹುಡುಕಿಕೊಡುವಂತೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ರಸ್ತೆ ಸಂಚಾರ ಬಂದ್ ಆದ ಸ್ಥಳದಲ್ಲಿ ವಿಶೇಷ ಕ್ಯಾಂಪ್

    ಕಾರವಾರ: ಕಳೆದ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ ಅಣಶಿ ಘಟ್ಟದಲ್ಲಿ ಉಂಟಾದ ಭೂಕುಸಿತದಿಂದಾಗಿ ರಸ್ತೆ ಸಂಚಾರ ಸಂಪೂರ್ಣ ನಿಲುಗಡೆಯಾಗಿದೆ. ಇದರಿಂದ ಜೋಯಿಡಾ, ದಾಂಡೇಲಿ ಹಾಗೂ ಹಳಿಯಾಳ ತಾಲೂಕುಗಳ ಜನಸಾಮಾನ್ಯರಿಗೆ ಜಿಲ್ಲಾ ಕೇಂದ್ರ ಕಾರವಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಆ. 25 ರಂದು ವಿಶೇಷ ಕ್ಯಾಂಪ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಈ ತಾಲೂಕುಗಳ ಜನಸಾಮಾನ್ಯರಿಗೆ ಜಿಲ್ಲಾ ಮಟ್ಟದ ಸರಕಾರಿ ಕಚೇರಿಗಳಲ್ಲಿನ ಕೆಲಸಗಳಿಗೆ ಹಾಗೂ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗಳಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಆ. 25 ರಂದು ವಿಶೇಷ ಕ್ಯಾಂಪ್ ಹಮ್ಮಿಕೊಳ್ಳಲಾಗಿದೆ. ಜೊಯಿಡಾ ತಾಲೂಕಿನ ಹಾಗೂ ಮಧ್ಯಾಹ್ನ ಹಳಿಯಾಳ ತಾಲೂಕಿನ ವಿವಿಧ ಇಲಾಖೆಗಳ ಸರಕಾರಿ ಕಚೇರಿಗಳಲ್ಲಿ ಆಯಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಸಾಧ್ಯವಾದಷ್ಟು ಮಟ್ಟಿಗೆ ಸ್ಥಳದಲ್ಲಿಯೇ ಅರ್ಜಿಗಳನ್ನು ಇತ್ಯರ್ಥ ಪಡಿಸಲಿದ್ದಾರೆ.

  • ಉತ್ತರಕನ್ನಡದ ಪ್ರಮುಖ ಸುದ್ದಿಗಳು ಇಲ್ಲಿದೆ.

    ಉತ್ತರಕನ್ನಡದ ಪ್ರಮುಖ ಸುದ್ದಿಗಳು ಇಲ್ಲಿದೆ.

    ಅನಧಿಕೃತ ವಸತಿಗೃಹಗಳ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು.

    ಗೋಕರ್ಣ: ಸೂಕ್ತ ಪರವಾನಿಗೆ ಪಡೆಯದೆ ಕಟ್ಟಡ ನಿರ್ಮಿಸಿ ಅನಧಿಕೃತ ವಸತಿಗೃಹಗಳನ್ನು ನಡೆಸಲಾಗುತ್ತಿದೆ ಮತ್ತು ತ್ಯಾಜ್ಯ ನೀರನ್ನು ಚರಂಡಿಗೆ ನೆರವಾಗಿ ಬಿಡಲಾಗುತ್ತಿದೆ. ಪ್ರಾಚ್ಯವಸ್ತು ಇಲಾಖೆಯ ಸಂರಕ್ಷಿತ ಪ್ರದೇಶದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಲಾಗಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಮಹಾಬಲೇಶ್ವರ ದೇವಾಲಯದ ಬಳಿ ಇರುವ ವಸತಿ ಗೃಹಗಳಿಗೆ ಕುಮಟಾ ತಹಶೀಲ್ದಾರ ವಿವೇಕ ಶೇಣ್ವಿ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅದರಂತೆ ಇಲ್ಲಿನ ಗೃಹಕ್ಕೆ ತೆರಳಿ ಮಾಲೀಕರಿಂದ ಮಾಹಿತಿ ಪಡೆದರು.

    ವಿದ್ಯಾರ್ಥಿ ಸಂಘದ ಉದ್ಘಾಟನೆ

    ಕುಮಟಾ: ಇಲ್ಲಿನ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ 2020-21ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಕುಮಟಾ ಕೆನರಾ ಕಾಲೇಜು ಸೊಸೈಟಿಯ ಕಾರ್ಯದರ್ಶಿ ಸುಧಾಕರ ನಾಯಕ ಇಂದು ನೆರವೇರಿಸಿದರು. ವಿಶ್ರಾಂತ ಪ್ರಾಚಾರ್ಯ ಮತ್ತು ಕೆನರಾ ಕಾಲೇಜು ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯ ಹಾಗೂ ಕಾರ್ಯಕ್ರಮದ ಅತಿಥಿ ಡಾ.ವಿವೇಕ ಪೈ ಮಾತನಾಡಿದರು. ಇನ್ನೋರ್ವ ಅತಿಥಿಗಳಾಗಿ ಹನುಮಂತ ಶಾನಭಾಗ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ 2018-19ನೇ ಸಾಲಿನಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಸುಮಾ ನಾಯ್ಕ, ಆಶಾ ನಾಯ್ಕ ಮತ್ತು ಸೌಮ್ಯ
    ಹೆಗಡೆಯವರನ್ನು ಸನ್ಮಾನಿಸಲಾಯಿತು. 34 ವರ್ಷಗಳ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಸಹಪಾಧ್ಯಾಪಕ ಡಾ.ಗಣಪತಿ ಶೇಟ್ ರವರನ್ನು ಸನ್ಮಾನಿಸಲಾಯಿತು.

    ನಿವೃತ್ತ ಶಿರಸ್ತೇದಾರ ಜಿ. ಎನ್.ನಾಯ್ಕ ಇನ್ನಿಲ್ಲ.

    ಅಂಕೋಲಾ: ತಾಲೂಕಿನ ಪುರಲಕ್ಕಿ ಬೇಣದ ನಿವಾಸಿಯಾಗಿದ್ದ ನಿವೃತ್ತ ಶಿರಸ್ತೇದಾರ ಜಿ. ಎನ್.ನಾಯ್ಕ ನಿಧನರಾದರು. ಕುಮಟಾ ಮೂಲದವರಾಗಿದ್ದಗಂಗಾಧರ ನಾಗಪ್ಪನಾಯ್ಕ ಪ್ರಥಮ ದರ್ಜೆ ಸಹಾಯಕರಾಗಿ ಜಿಲ್ಲೆಯ ಹೊನ್ನಾವರ, ಭಟ್ಕಳದಲ್ಲಿ ಹಾಗೂ ಜಿಲ್ಲಾಧಿ‌ಕಾರಿಗಳ ಕಚೇರಿಯಲ್ಲಿಯೂ ಸೇವೆ ಸಲ್ಲಿಸಿದ್ದರು. ಶಿರಸಿ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಶಿರಸ್ತೇದಾರರಾಗಿ ನಿವೃತ್ತಿ ಹೊಂದಿದ್ದು, ಸುಮಾರು 30 ವರ್ಷಗಳ ಕಾಲ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸರಳ ವ್ಯಕ್ತಿತ್ರದ ಮೂಲಕ ಗುರುತಿಸಿ ಕೊಂಡಿದ್ದರು. ಮೃತ ಜಿ. ಎನ್ ನಾಯ್ಕ, ಇಬ್ಬರು ಗಂಡು ಮಕ್ಕಳು, ಓರ್ವ ಮಗಳು, ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

    ಡಾ.ಗುರುರಾಜ ಕರ್ಜಗಿಯವರಿಂದ ವಿಶೇಷ ಉಪನ್ಯಾಸ

    ಹೊನ್ನಾವರ: ಶ್ರೀ ವಿಶ್ವವೀರಾಂಜನೇಯ ಮಹಾ ಸಂಸ್ಥಾನಂ, ಹೇಮಪುರ ಮಹಾಪೀಠ ಶ್ರೀಕ್ಷೇತ್ರ ಬಂಗಾರಮಕ್ಕಿಯ ಮಾರುತಿ ಗುರೂಜಿಯವರ ಚಾತುರ್ಮಾಸ್ಯವ್ರತದ ಪ್ರಯುಕ್ತ ಆ. 23 ರಂದು ಮಧ್ಯಾಹ್ನ 2:30ಕ್ಕೆ ಪ್ರಸ್ತುತ ಶೈಕ್ಷಣಿಕ‌ ವ್ಯವಸ್ಥೆಗೆ ಪೂರಕವಾಗಿ ಸಂಸ್ಕಾರ ಮತ್ತು ಶಿಕ್ಷಣದೊಂದಿಗಿನ ಸಾಮರಸ್ಯದ ಸಂಸ್ಕಾರ-ಶಿಕ್ಷಣ ಎಂಬ ವಿಚಾರದ ಕುರಿತಾಗಿ ಖ್ಯಾತ ಶಿಕ್ಷಣ ತಜ್ಞರು ಹಾಗೂ ಸಾಂಸ್ಕೃತಿಕ ಚಿಂತಕರು ಆದ ಡಾ.ಗುರುರಾಜ ಕರ್ಜಗಿಯವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದ್ದು ಆಸಕ್ತರು ಪಾಲ್ಗೊಳ್ಳಬಹುದಾಗಿದೆ. ಕೋವಿಡ್ ನಿಯಮಪಾಲನೆ ಕಡ್ಡಾಯ ಎಂದು ತಿಳಿಸಲಾಗಿದೆ.

     

  • ಉತ್ತರಕನ್ನಡದ ಪ್ರಮುಖ ಸುದ್ದಿಗಳು

    ಉತ್ತರಕನ್ನಡದ ಪ್ರಮುಖ ಸುದ್ದಿಗಳು

    ಸೈಕಲ್ ಹಾಗೂ ಬೈಕ್ ಡಿಕ್ಕಿ

    ಕುಮಟಾ ತಾಲೂಕಿನಲ್ಲಿ ಬೈಕ್ ಡಿಕ್ಕಿ ಹೊಡೆದು ಸೈಕಲ್ ಸವಾರ ಗಾಯಗೊಂಡ ಘಟನೆ ಪಟ್ಟಣದ ವಿವೇಕನಗರದ ಕೆನರಾ ಬ್ಯಾಂಕ್ ಎದುರು ಸಂಭವಿಸಿದೆ. ಕುಮಟಾ ತಾಲೂಕಿನ ಚಿಟ್ಟಿಕಂಬಿಯ ರಾಘವೇಂದ್ರ ರಾಮರಾಯ ಕಾಮತ್ (30) ಗಾಯಗೊಂಡ ಸೈಕಲ್ ಸವಾರ, ಬೈಕ್ ಸವಾರ ಸಂತೋಷ ಆಚಾರಿ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಗಾಯಗೊಂಡ ರಾಘವೇಂದ್ರ ಕಾಮತ ಅವರ ಚಿಕಿತ್ಸೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ
    ದಾಖಲಾಗಿದೆ.

    ಡಾ.ಆರ್.ಎನ್. ಶೆಟ್ಟಿಯವರ ಪುತ್ಥಳಿ ಸ್ಥಾಪಿಸಲು ನಿರ್ಧಾರ

    ಮುರ್ಡೇಶ್ವರದ ನವನಿರ್ಮಾತೃ ಡಾ.ಆರ್.ಎನ್.
    ಶೆಟ್ಟಿಯವರ ಪುತ್ಥಳಿಯನ್ನು ಸ್ಥಾಪಿಸುವ ಕುರಿತು ಮುರ್ಡೇಶ್ವರ ನಾಗರಿಕರು ಸಭೆ ಸೇರಿ ನಿರ್ಣಯಿಸಿದ್ದು ಮತ್ಥಳಿಯನ್ನು ಮುರ್ಡೇಶ್ವರದ ಪುಷ್ಕರಣಿಯ ಆವಾರದಲ್ಲಿ ಸ್ಥಾಪಿಸಲು ತೀರ್ಮಾನಿಸಿದ್ದಾರೆ. ಆರ್.ಎನ್. ಶೆಟ್ಟಿಯವರ ಜನ್ಮದಿನದಂದು ಸಭೆ ಸೇರಿದ ಮುರ್ಡೇಶ್ವರ ನಾಗರಿಕರು ಮುರ್ಡೇಶ್ವರಕ್ಕೆ ಅವರು ಕೊಡುಗೆ ನೀಡಿರುವುದನ್ನು ಪರಿಗಣಿಸಿ ಅವರ ಹೆಸರನ್ನು ಅಜರಾಮರವನ್ನಾಗಿಸಲು ಎಲ್ಲರ ಸಹಕಾರ ಬೇಕು ಎಂದು ಮುಡೇಶ್ವರ ನಾಗರೀಕ ಸೇವಾ ಸಮಿತಿಯ ಅಧ್ಯಕ್ಷ ಎಸ್.ಎಸ್.ಕಾಮತ್ ಅವರು ಹೇಳಿದರು. ಆ ಪ್ರಯುಕ್ತ ನಾವು ಇಂದೇ ಶಿಲಾ ಪೂಜೆಯನ್ನು ನೆರವೇರಿಸುತ್ತಿದ್ದು ಶಿಲಾ ಪ್ರತಿಷ್ಠೆಯನ್ನು ಮಾಡಿ ಮುಂದಿನ ಕಾರ್ಯಕ್ಕೆ ಮುಂದಾಗುತ್ತಿದ್ದೇವೆ ಎಂದು ಅವರು ಹೇಳಿದರು. ನಂತರ ಮಾತನಾಡಿದ ರಾಮಾ ನಾಯ್ಕ ಅವರು ಡಾ.ಆರ್.ಎನ್.ಶೆಟ್ಟಿ ಯವರು ಈ ನಾಡಿಗೆ ನೀಡಿದ ಕೊಡುಗೆ ಅಪಾರವಾದದ್ದು ಎಂದರು.

    ಬಾವಿಗೆ ಬಿದ್ದ ಹಸುವಿನ ರಕ್ಷಣೆ.

    ಹೊನ್ನಾವರ ತಾಲೂಕಿನ ಹಡಿನಬಾಳ ಗ್ರಾಮದ ಕಡಿಗೇರಿಯ ನಾರಾಯಣ ನಾಯ್ಕರವರ ಮನೆಯ ಸುಮಾರು 30 ಅಡಿ ಆಳ 8 ಅಡಿ ನೀರಿರುವ ಬಾವಿಯಲ್ಲಿ ಬಿದ್ದ ಆಕಳನ್ನು ಅಗ್ನಿಶಾಮಕದಳದವರು ರಕ್ಷಿಸಿದ್ದಾರೆ. ಕಾರ್ಯಚರಣೆಯಲ್ಲಿ ಠಾಣಾಧಿಕಾರಿ ಜಯಾನಂದ ಎನ್.ಪಟಗಾರ ಸಿಬ್ಬಂದಿಗಳಾದ ಅರುಣ ಎಸ್. ಮಾಳೋದೆ, ನಾಗೇಶ್ ಪೂಜಾರಿ, ಗಜಾನನ ಪಿ. ನಾಯ್ಕ, ರಮೇಶ ಬಿ. ಚಿಕ್ಕಲಗಿ, ವೆಂಕಟೇಶ ನಾಯ್ಕ, ವಿನಾಯಕ ಎಸ್‌. ಭಂಡಾರಿ ಹಾಗೂ ಅಭಿಷೇಕ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಹಸುವನ್ನು ರಕ್ಷಣೆ ಮಾಡಿದ್ದಾರೆ.

    ಕಾರು ಹಾಗೂ ಬೈಕ್ ನಡುವೆ ಅಪಘಾತ

    ಅತಿ ವೇಗವಾಗಿ ಬಂದ ಕಾರೊಂದು ಟಿವಿಎಸ್ ಎಕ್ಸಲ್ ಗೆ ಡಿಕ್ಕಿಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶಿರಸಿಯಲ್ಲಿ ನಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರನ ಟಿವಿಎಸ್ ಎಕ್ಸೆಲ್ ಸಂಪೂರ್ಣ ಜಖಂ ಆಗಿದ್ದು, ಆತನಿಗೂ ಗಂಭೀರ ಸ್ವರೂಪದ ಗಾಯಗಳಾಗಿವೆ. ಹೊಸಗದ್ದೆಯ ಓಣಿಕೇರಿ ನಿವಾಸಿ ಆತ್ಮಾತಾಮ ಶಂಕರ್ ಪಂಡಿತ ಗಾಯಗೊಂಡ ವ್ಯಕ್ತಿ. ಬನವಾಸಿ ಕಡೆಯಿಂದ ಶಿರಸಿ ಕಡೆಗೆ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ವೇಳೆ ಈ ದುರ್ಘಟನೆ ನಡೆದಿದ್ದು, ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.

  • ಮಾರಿಕಾಂಬಾ‌ ದೇವಸ್ಥಾನ ಶಿರಸಿ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

    ಮಾರಿಕಾಂಬಾ‌ ದೇವಸ್ಥಾನ ಶಿರಸಿ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

    ಶಿರಸಿ : ಶ್ರೀ ಮಾರಿಕಾಂಬಾ‌ ದೇವಸ್ಥಾನ ಶಿರಸಿ ವತಿಯಿಂದ, ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು ಹಾಗೂ ಅರ್ಹರು ಅರ್ಜಿ ಸಲ್ಲಿಸಲು ವಿನಂತಿಸಲಾಗಿದೆ.

    2021 ನೇ ಇಸ್ವಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 95 % ಕ್ಕಿಂತ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿ/ನಿಯರಿಗೆ ಶ್ರೀ ಮಾರಿಕಾಂಬಾ ದೇವಸ್ಥಾನ ಶಿರಸಿ(ಉ.ಕ.) ವತಿಯಿಂದ ಈ ಹಿಂದಿನಿ0ದಲೂ ಬಂದ ಪದ್ದತಿಯಂತೆ ಪ್ರತಿಭಾ ಪುರಸ್ಕಾರ ನೀಡಲು ಮಂಡಳಿಯು ನಿರ್ಧರಿಸಿದೆ.

    ಕಾರಣ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿದವರಿಗೆ ಈ ಪ್ರತಿಭಾ ಪುರಸ್ಕಾರ ಅನ್ವಯವಾಗಲಿದೆ.

  • ಆತ್ಮಹತ್ಯಗೆ ಯತ್ನಿಸಿದ ಬಾಲಕ: ಆತ್ಮಹತ್ಯಗೆ ಶರಣಾದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿ: ದೇವಾಲಯದಲ್ಲಿ ಕೊರೋನಾ ಪರೀಕ್ಷೆ

    ಆತ್ಮಹತ್ಯಗೆ ಯತ್ನಿಸಿದ ಬಾಲಕ: ಆತ್ಮಹತ್ಯಗೆ ಶರಣಾದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿ: ದೇವಾಲಯದಲ್ಲಿ ಕೊರೋನಾ ಪರೀಕ್ಷೆ

    ತಾಯಿಯ ಜೊತೆ ಮನಸ್ಥಾಪ : ಆತ್ಮಹತ್ಯೆಗೆ ಯತ್ನಿಸಿದ ಬಾಲಕ

    ತಾಯಿ ಮತ್ತು ಮಗನ ನಡುವೆ ಜಗಳವಾಗಿದ್ದು, ತಾಯಿ ಜೊತೆ ಮಗನು ಮನಸ್ತಾಪ ಮಾಡಿಕೊಂಡು ವಿಷಸೇವನೆ ಮಾಡಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಬನವಾಸಿಯಲ್ಲಿ ನಡೆದಿದೆ. ಈ ವೇಳೆ ಶಿರಸಿ -ಬನವಾಸಿ-ಗೋಣೂರು ಗ್ರಾಮದಿಂದ 112ಗೆ ಕರೆ ಬಂದಿದ್ದು,  ತಕ್ಷಣ ತುರ್ತು ಸ್ಪಂದನಾ ವಾಹನ ಸ್ಥಳಕ್ಕೆ ತೆರಳಿದೆ. ಕೂಡಲೇ 112 ವಾಹನದ ಸಿಬ್ಬಂದಿಗಳನ್ನು ವಿಷ ಕುಡಿದ ಹುಡುಗನನ್ನು ತಕ್ಷಣ ಬನವಾಸಿ ಆಸ್ಪತ್ರೆಗೆ ಸಾಗಿಸಿ  ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.

    ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾತ ಆತ್ಮಹತ್ಯೆಗೆ ಶರಣು

    ಶಿರಸಿ ಮೂಲದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇನ್ನೇನು ನಿವೃತ್ತಿಗೆ ಮೂರು ತಿಂಗಳು ಬಾಕಿ ಇರುವಾಗ ಆತ್ಮಹತ್ಯೆಗೆ ಶರಣಾಗಿದ್ದು ಕುಟುಂಬದವರನ್ನು ಆತಂಕಕ್ಕೆ ದೂಡಿದೆ. ತಾಲೂಕಿನ ಕೂರ್ಗಿಕೊಡ್ಲು ಗ್ರಾಮದ ಹರೀಶ ನಾರಾಯಣ ನಾಯ್ಕ ಆತ್ಮಹತ್ಯೆಗೆ ಶರಣಾದ ಯೋಧನಾಗಿದ್ದು ಈತನು ಲಕ್ಷದ್ವೀಪದಲ್ಲಿ ಸೇವೆ ಸಲ್ಲಿಸುತ್ತಿದ್ದ. ಕಳೆದ 20 ವರ್ಷಗಳಿಂದ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಈತ ಇನ್ನು ಮೂರು ತಿಂಗಳಲ್ಲಿ ನಿವೃತ್ತರಾಗುವುದರಲ್ಲಿದ್ದರು. ಆದರೆ ಇದೀಗ ಸುದ್ದಿ ತಿಳಿದ ಆತನ ಕುಟುಂಬಸ್ಥರು ಬರಸಿಡಿಲು ಎರಗಿದಂತಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ಏನೆಂಬುದು ತಿಳಿದು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

    ಮಾರಿಕಾಂಬಾ ದೇವಸ್ಥಾನದಲ್ಲಿ 96 ಜನರಿಗೆ ಕೊವಿಡ್‌ ಪರೀಕ್ಷೆ

    ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ 96 ಜನರಿಗೆ ಕೊವಿಡ್‌ ಪರೀಕ್ಷೆ ನಡೆಸಲಾಯಿತು. ಸರಕಾರದ ಆದೇಶದಂತೆ ದೇವಾಲಯದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಪ್ರತಿ 10 ದಿನಕ್ಕೆ ಒಂದು ಸಾರಿಯಂತೆ ಕೊವಿಡ್ ಪರೀಕ್ಷೆ ನಡೆಸಲು ಆದೇಶಿಸಿರುವುದರಿಂದ ದೇವಾಲಯದ ಸಿಬ್ಬಂದಿಗಳು, ಅರ್ಚಕರು, ಹಾಗೂ ದೇವಸ್ಥಾನದ ಸಮೀಪ ಇರುವ ಭಕ್ತರು ಮತ್ತು ಸಾರ್ವಜನಿಕರೂ ಸಹ ಉಪಸ್ಥಿತರಿದ್ದು ಕೊವಿಡ್ ಪರೀಕ್ಷೆ ಮಾಡಿಸಿಕೊಂಡರು. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದು ಎಲ್ಲರನ್ನು ಪರೀಕ್ಷೆ ನಡೆಸಿದರು.

     

  • ಅಗಷ್ಟ 1 ಭಾನುವಾರ ಕೊಂಕಣಿ ಅಕಾಡೆಮಿ ಗೌರವ ಪುರಸ್ಕಾರ ಕಾರ್ಯಕ್ರಮ.

    ಅಗಷ್ಟ 1 ಭಾನುವಾರ ಕೊಂಕಣಿ ಅಕಾಡೆಮಿ ಗೌರವ ಪುರಸ್ಕಾರ ಕಾರ್ಯಕ್ರಮ.

    ಕುಮಟಾ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕೊಡಮಾಡುವ ಗೌರವ ಪುರಸ್ಕಾರ ಕಾರ್ಯಕ್ರಮವು ಅಗಷ್ಟ 1 ನೇತಾರೀಖಿನಂದು ನೆರವೇರಲಿದೆ.ಕೋವಿಡ್ ನಿಯಮಾವಳಿಗಳ ಕಾರರಣದಿಂದ ಅತ್ಯಂತ ಸರಳವಾಗಿ ನೆರವೇರುವ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಕೊಂಕಣಿ ಸಾಹಿತಿ ಹಾಗೂ ಸಂಘಟಕ ಶ್ರೀ ಅರುಣ ಉಭಯಕರ್ ಹಾಗೂ ಜಾನಪದ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಯಲ್ಲಾಪುರದ ಶ್ರೀಮತಿ ಲಕ್ಷ್ಮೀ ಸಿದ್ದಿಯವರಿಗೆ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.ಈ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನೆಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು.ಆದರೆ ಬದಲಾದ ಸನ್ನಿವೇಶದಲ್ಲಿ ಅಕಾಡಮಿಯ ಕೇಂದ್ರ ಸ್ಥಾನವಾದ ಮಂಗಳೂರಿನ ಪುರಭವನದಲ್ಲಿ ರವಿವಾರ ಅಪರಾಹ್ನ ೨ ಗಂಟೆಗೆ ನೆಡೆಸಲಾಗುತ್ತದೆ ಎಂದು ಅಕಾಡೆಮಿಯ ಸದಸ್ಯ ಚಿದಾನಂದ ಭಂಡಾರಿ ತಿಳಿಸಿದ್ದಾರೆ.

    ಪ್ರಮುಖ ಸುದ್ದಿಗಳನ್ನು ಓದಿ..

    ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಪೀಠಾರೋಹಣ ಕಾರ್ಯಕ್ರಮ ನಾಳೆ.

    ಉತ್ತರಕನ್ನಡಕ್ಕೆ ಇಂದು ಸಿ.ಎಂ ಬರ್ತಾರೆ