-ವಿದ್ಯಾಧರ ಕಡತೋಕ
ನೀನು ಕನಸಿನಲ್ಲೇ ಇದ್ದುಬಿಡು
ತೋಚಿದಷ್ಟು ಬಣ್ಣ ಸುರುವಿ
ನಿನ್ನವಷ್ಟು ಭಾವ ಕೆಡವಿ
ನನ್ನ ಬಯಕೆಯೆಲ್ಲ ಕೊಡವಿ
ಚಿತ್ರ ಬರೆಯುವೆ…
ನಾಳೆ ಮತ್ತೆ ಎಂಥ ಕನಸೋ
ಬೊಗಸೆ ತುಂಬಾ ನೂರು ಬಣ್ಣ
ತೆರೆಯಬಹುದು ಒಲವುಗಣ್ಣ….
ಕಾಯಬೇಕು ನೀನು-ನಾನು…
ಅದೇ ಪಥದಲಿ
ಎದೆಯ ಚಿತ್ರಪಟದಲಿ…

RELATED ARTICLES  ವೈವಿಧ್ಯಮಯ ತಿನಿಸು ಚಪ್ಪನ ಪಚಡಿ.! ಹೇಗೆ ತಯಾರಿಸಬಹುದು ಹೇಳಿ.