ಬೇಕಾಗುವ ಪದಾರ್ಥಗಳು
ಸಕ್ಕರೆ- 1.5 ಬಟ್ಟಲು
ನೀರು – 1.5 ಬಟ್ಟಲು
ಕೇಸರಿ – 3-4 ದಳ
ಏಲಕ್ಕಿ ಪುಡಿ – ಚಿಟಿಕೆ
ನಿಂಬೆ ರಸ- ಸ್ವಲ್ಪ
ಹಾಲಿನ ಪುಡಿ – 1 ಬಟ್ಟಲು
ಮೈದಾ ಹಿಟ್ಟು – ಮುಕ್ಕಾಲು ಬಟ್ಟಲು
ರವೆ – 1 ಚಮಚ
ಬೇಕಿಂಗ್ ಪೌಡರ್ – ಚಿಟಿಕೆ
ತುಪ್ಪ – ಸ್ವಲ್ಪ
ಡೆಸಿಕೇಟೆಡ್ ಕೊಕೋನಟ್/ತರಿತರಿಯಾಗಿ ಪುಡಿ ಮಾಡಿದ ಕೊಬ್ಬರಿ ತುರಿ – 1 ಬಟ್ಟಲು
ಮೊಸರು – 1 ಚಮಚ
ಬಿಸಿ ಹಾಲು -3-4 ಚಮಚ

RELATED ARTICLES  ಬದನೇಕಾಯಿ ಬೊಂಬಾಟ್ ತಿಂಡಿ! ಕ್ಷಣದಲ್ಲಿಯೇ ನೀವು ತಯಾರಿಸಿ.

ಮಾಡುವ ವಿಧಾನ…
ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ, ಸಕ್ಕರೆ, ನೀರು, ಏಲಕ್ಕಿ ಪುಡಿ, ನಿಂಬೆ ರಸವನ್ನು ಹಾಕಿ ಪಾಕ ತಯಾರು ಮಾಡಿಟ್ಟುಕೊಳ್ಳಬೇಕು.
ನಂತರ ಮತ್ತೊಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಹಾಲಿನ ಪುಡಿ, ಮೈದಾ, ರವೆ, ಬೇಕಿಂಗ್ ಪೌಡರ್, ತುಪ್ಪವನ್ನು ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಇದಕ್ಕೆ ಮೊಸರು, ಬಿಸಿ ಹಾಲು ಹಾಕುತ್ತಾ ಚೆನ್ನಾಗಿ ಮಿಶ್ರಣ ಮಾಡಿ ಹಿಟ್ಟನ್ನು ತಯಾರಿ ಮಾಡಿಕೊಳ್ಳಬೇಕು.

RELATED ARTICLES  ಬಿಸಿಬಿಸಿ ಗೋಳಿ ಬಜೆ ಸವಿಯಿರಿ!

ನಂತರ ಇದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ಒಲೆಯ ಮೇಲೆ ಬಾಣಲೆಯಿಟ್ಟು ತುಪ್ಪ ಸಣ್ಣ ಉರಿಯಲ್ಲಿ ತುಪ್ಪನ್ನು ಕಾಯಿಸಿ, ಮಾಡಿಟ್ಟುಕೊಂಡ ಉಂಡೆಗಳನ್ನು ಹಾಕಿ ಸಣ್ಣ ಉರಿಯಲ್ಲಿಯೇ ಚಿನ್ನದ ಬಣ್ಣ ಬರುವವರೆಗೂ ಕರಿದುಕೊಳ್ಳಬೇಕು.
ನಂತರ ಈ ಉಂಡೆಗಳನ್ನು ತಣ್ಣಗಾದ ಪಾಕಕ್ಕೆ ಹಾಕಿ, ಅರ್ಧ ಗಂಟೆಗಳ ಬಳಿಕ ತೆಗೆದು ಕೊಬ್ಬರಿ ತುರಿಯಲ್ಲಿ ಹೊರಳಿಸಿದರೆ, ರುಚಿಕರವಾದ ಡ್ರೈ ಗುಲಾಬ್ ಜಾಮೂನ್ ಸವಿಯಲು ಸಿದ್ಧ.